ಬೆಂಗಳೂರು, ಜುಲೈ 26: ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಚಾಮರಾಜನಗರ, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಭಾಗಮಂಡಲ, ಕ್ಯಾಸಲ್ರಾಕ್, ಮುಲ್ಕಿ, ಸುಬ್ರಹ್ಮಣ್ಯ, ಕೊಟ್ಟಿಗೆಹಾರ, ಸುಳ್ಯ, ಗೇರುಸೊಪ್ಪ, ಶಿರಾಲಿ, ಮಾಣಿ, ಲಿಂಗನಮಕ್ಕಿ, ಜಯಪುರ, ಉಪ್ಪಿನಂಗಡಿ, ಮಂಗಳೂರು, ಪುತ್ತೂರು, ಪಣಂಬೂರು, ಕೊಲ್ಲೂರು, ಶೃಂಗೇರಿಯಲ್ಲಿ ಭಾರಿ ಮಳೆಯಾಗಲಿದೆ.
ಸಿದ್ದಾಪುರ, ಕದ್ರಾ, ಕೊಪ್ಪ, ವಿರಾಜಪೇಟೆ, ತಾಳಗುಪ್ಪ, ಬೆಳ್ತಂಗಡಿ, ಕಮ್ಮರಡಿ, ಸೋಮವಾರಪೇಟೆ, ಧರ್ಮಸ್ಥಳ, ಕುಂದಾಪುರ, ಕಾರವಾರ, ಮಂಕಿ, ಸಿದ್ದಾಪುರ, ಉಡುಪಿ, ನಿರ್ಣಾ, ಹುಡುಕೆರೆ, ನಾಪೋಕ್ಲು, ಪೊನ್ನಂಪೇಟೆ, ಯಲ್ಲಾಪುರ, ಮಂಚಿಕೆರೆ, ಕಳಸ, ಮೂರ್ನಾಡು, ಕುಮಟಾ, ಬಾಳೆಹೊನ್ನೂರು, ಮೂಡಿಗೆರೆ, ಮಂಡಗದ್ದೆಯಲ್ಲಿ ಅತ್ಯಧಿಕ ಮಳೆಯಾಗಿದೆ.
ಮಂಠಾಳ, ಸಕಲೇಶಪುರ, ಶನಿವಾರಸಂತೆ, ಗೋಣಿಕೊಪ್ಪಲು, ತ್ಯಾಗರ್ತಿ, ಅಂಕೋಲಾ, ರಾಜೇಶ್ವರ, ಹುಮನಾಬಾದ್, ಚಿಂಚೋಳಿ, ಹಾಸನ, ಸಾಲಿಗ್ರಾಮ, ಚಿತ್ತಾಪುರ, ಮಹಾಗಾವ್, ಹಳಿಯಾಳ, ಕಿರವತ್ತಿ, ಮುಂಡಗೋಡ, ಸೈದಾಪುರ, ಅಡಕಿ, ಕಮಲಾಪುರ, ನಿಂಬರ್ಗಾ, ಬೆಳಗಾವಿ ನಗರ, ಔರಾದ್, ಧಾರವಾಡ, ಕಲಬುರಗಿ, ಧಾರವಾಡ, ಭದ್ರಾವತಿ, ಆನವಟ್ಟಿ, ಕೃಷ್ಣರಾಜಪೇಟೆ, ಕೋಲಾರ, ಆಳಂದ, ಜೇವರ್ಗಿ, ಹುಬ್ಬಳ್ಳಿ, ಕುಂದಗೋಳ, ಕುಷ್ಟಗಿ, ಹನುಮಸಾಗರ, ಶಿವಮೊಗ್ಗ, ಚಿಕ್ಕಮಗಳೂರು, ಶ್ರವಣಬೆಳಗೊಳ, ಬೆಳ್ಳೂರು, ಅಜ್ಜಂಪುರ, ಉಚ್ಚಂಗಿದುರ್ಗ, ಮಾಲೂರು, ಮಸ್ಕಿ, ಲಿಂಗಸುಗೂರು, ಸಿಂಧನೂರು, ಖಜೂರಿ, ನಾರಾಯಣಪುರ, ಬಾಗಲಕೋಟೆ, ಕೂಡಲಸಂಗಮ, ಲೋಕಾಪುರ, ಇಳಕಲ್, ಕೆರೂರು, ನಿಪ್ಪಾಣಿ,ಹೊಸಕೋಟೆ, ಹೊಸಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೊನ್ನಾಳಿ, ಕಂಪ್ಲಿ, ಮೈಸೂರಿನಲ್ಲಿ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ತುಂತುರು ಮಳೆ ಶುರುವಾಗಿದೆ, ಎಚ್ಎಎಲ್ನಲ್ಲಿ 25.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ, ನಗರದಲ್ಲಿ 24.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 25.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.