
Featured StoryDakshina Kannada
ಜಾತ್ಯಾತೀತ ಮನಸ್ಸಿನ ಜೆಡಿಎಸ್ ನಾಯಕರೇ, ನೀವು ಕಾಂಗ್ರೆಸ್ಗೆ ಬನ್ನಿ: ರಮಾನಾಥ ರೈ
ಮಂಗಳೂರು: ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೆ ಜೆಡಿಎಸ್ನಲ್ಲಿನ ಜಾತ್ಯತೀತ ಚಿಂತನೆಯ ನಾಯಕರು ಅತಂತ್ರರಾಗಿದ್ದಾರೆ. ಅವರೆಲ್ಲರೂ ಕಾಂಗ್ರೆಸ್ಗೆ ಬರಬಹುದು ಎಂದು ಮಾಜಿ ಸಚಿವ ರಮಾನಾಥ ರೈ ಆಹ್ವಾನ ನೀಡಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ನ ಜಾತ್ಯತೀತ ನಾಯಕರು ಕಾಂಗ್ರೆಸ್ಗೆ ಬಂದರೆ ಕಾಂಗ್ರೆಸ್ ಮತ್ತಷ್ಟು ಗಟ್ಟಿಯಾಗುತ್ತದೆ. ನಾವು ಜೊತೆಯಾಗಿ ಪಕ್ಷವನ್ನು ಬಲಿಷ್ಠಗೊಳಿಸೋಣ ಎಂದರು.
ಕಾಂಗ್ರಸ್ ಸರಕಾರ ಬಂದ ಬಳಿಕ ನೈತಿಕ ಪೊಲೀಸ್ಗಿರಿಗೆ ಕಡಿವಾಣ: ಕಾಂಗ್ರೆಸ್ ಸರಕಾರ ಬಂದ ಬಳಿಕ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕಡಿಮೆಯಾಗಿದೆ. ಬೆಳಕಿಗೆ ಬಂದ ಪ್ರಕರಣಗಳಲ್ಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.




