Featured StoryNational

41 ಕಾರ್ಮಿಕರನ್ನು ರಕ್ಷಿಸಿದ “ರ಼್ಯಾಟ್ ಮೈನಿಂಗ್ ಕಾರ್ಮಿಕರಿಗೆ” ಅದ್ದೂರಿ ಸ್ವಾಗತ | “ಜೀವನದಲ್ಲಿ ಪ್ರಥಮ ಬಾರಿಗೆ ನಮ್ಮನ್ನೂ ಘನತೆಯಿಂದ ನೋಡಲಾಗಿದೆ” – ಕಾರ್ಮಿಕರ ಮನದಾಳ ಮಾತು ನೋಡಿ

ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರ ಅಮೂಲ್ಯ‌ ಜೀವಗಳನ್ನು ಆಧುನಿಕ ಜಗತ್ತಿನ ಯಾವುದೇ ಯಂತ್ರ ರಕ್ಷಿಸಲು ಸಾಧ್ಯವಾಗದೆ ಇದ್ದಾಗ ರ಼್ಯಾಟ್ ಮೈನಿಂಗ್ ವರ್ಕರ್ ತಮ್ಮ ಜೀವ ಪಣಕ್ಕಿಟ್ಟು ರಕ್ಷಿಸಿದ್ದು ಇದೀಗ ಇತಿಹಾಸ.

ದೆಹಲಿ ಮೂಲದ ಕಾರ್ಮಿಕರು ರಕ್ಷಣೆಗೆ ಧಾವಿಸಲು ಕರೆ ಬಂದಾಗ ಒಂದು ನಿಮಿಷ ತಡ ಮಾಡದೆ ಹೊರಟು ನಿಂತಿದ್ದಾರೆ. ಇವರ್ಯಾರು ಶ್ರೀಮಂತರಲ್ಲ ಕೂಲಿ ಮಾಡಿ ಬದುಕುವ ಬಡ ಜೀವಗಳು. ತಮ್ಮಂತೆ ಇರುವ ಕಾರ್ಮಿಕರ ಜೀವ ಕಷ್ಟದಲ್ಲಿರುವುದನ್ನು ನೋಡಿ ರಕ್ಷಿಸಲು ಧಾವಿಸಿದ್ದಾರೆ. ತಮ್ಮದೇ ಕೈಯಾರೆ ಬಂಡೆ ಕೊರೆದು ರಕ್ಷಿಸಿದ್ದಾರೆ. ನಿನ್ನೆಯವರೆಗೆ ಗುರುತಿಸದ ಜಗತ್ತು ಇವರನ್ನು ಗುರುತಿಸಿದೆ. ಹಾರ ಹಾಕಿ ಅವರ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದ್ದಾರೆ.

ಈ ತಂಡದ ನಾಯಕ ಹೇಳಿದಂತೆ ಈ ಕೆಲಸ ಈ ಮುಂಚೆ ಕೂಡ ಮಾಡಿದ್ದಾರೆ. ಪ್ರವಾಹದ ಸಂದರ್ಭದಲ್ಲೂ ರಕ್ಷಣೆ ಮಾಡಿದ್ದಾರೆ. ಪ್ರಥಮ ಬಾರಿ ಗೌರವ ದಕ್ಕಿದೆ. ನಾವು ಕೂಲಿಮಾಡಿ ಸಂಜೆ ಮನೆಗೆ ಹೋಗಿ ಊಟ ಮಾಡಿ ಮಲಗುವ ಸಾಮಾನ್ಯ ಕಾರ್ಮಿಕರು. ಇವತ್ತು ಈ ಸನ್ಮಾನ ನೋಡಿ ಖುಷಿಯೆನಿಸುತ್ತದೆ. ಇವತ್ತೂ ನಮಗೆ ಈ ಗೌರವ ದಕ್ಕಿರಬಹುದು. ಆದರೆ ಇವತ್ತಿಗೂ ನಮ್ಮಂತಹ ಕಾರ್ಮಿಕರು ದುಸ್ಥಿತಿಯಲ್ಲಿ ಬದುಕುತ್ತಿರುವುದು ವಾಸ್ತವ ಎಂದು ಹೇಳಿದ್ದಾರೆ‌.

ಇತರ ಸಹಪಾಠಿಗಳು ಕೂಡ NDTV ಯೊಂದಿಗೆ ಮಾತನಾಡಿದ್ದರೆ ಸ್ವತಃ ನೀವೇ ಈ ವೀಡಿಯೋ ನೋಡಿ.

 

 

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button