ಜಾತಿ ಗಣತಿ ರಾಷ್ಟ್ರೀಯ ಏಕತೆಗೆ ಹೊಡೆತ ನೀಡಲಿದೆ – ಆರ್.ಎಸ್.ಎಸ್

ನಾಗ್ಪುರ: ರಾಷ್ಟ್ರವ್ಯಾಪಿ ಜಾತಿ ಗಣತಿ ನಡೆಸುವ ಕುರಿತು ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ತೆಗೆದುಕೊಂಡಿರುವ ನಿಲುವನ್ನು ಆರ್‌ಎಸ್‌ಎಸ್ ಅಸಮ್ಮತಿ ವ್ಯಕ್ತಪಡಿಸಿದೆ. ಮಂಗಳವಾರ ಸಂಘದ ಪ್ರಧಾನ ಕಚೇರಿಗೆ ಭೇಟಿ ನೀಡಿದ ಮಹಾರಾಷ್ಟ್ರದ ಬಿಜೆಪಿ ಮತ್ತು ಶಿವಸೇನೆ ಶಾಸಕರೊಂದಿಗಿನ ಸಭೆಯಲ್ಲಿ ಅದು ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.

RSS ವಿದರ್ಭ ಪ್ರದೇಶದ ಮುಖ್ಯಸ್ಥ ಶ್ರೀಧರ್ ಗಾಡ್ಗೆ ಅವರು TOI ಗೆ ಜಾತಿ ಗಣತಿಯು ರಾಜಕೀಯವಾಗಿ ಕೆಲವು ಜನರಿಗೆ ಪ್ರಯೋಜನವನ್ನು ನೀಡಬಹುದು. ಏಕೆಂದರೆ ಇದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ಸಂಯೋಜನೆಯ ದತ್ತಾಂಶ ಒದಗಿಸುತ್ತದೆ.ಆದರೆ ಇದು ವಾಸ್ತವವಾಗಿ ರಾಷ್ಟ್ರೀಯ ಏಕತೆಗೆ ಹಾನಿಕಾರಕವಾಗಿದೆ ಎಂದಿದ್ದಾರೆ.

ಜಾತಿ ಆಧಾರಿತ ಜನಗಣತಿ ವಿಚಾರಕ್ಕೆ ಬಿಜೆಪಿ ವಿರೋಧವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಇದಕ್ಕೆ ವಿರೋಧವಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಸಮಾನತೆ, ಜಾತಿ ಆಧಾರಿತ ಜನಗಣತಿ, ಸ್ವದೇಶಿ, ಕೌಟುಂಬಿಕ ಮೌಲ್ಯಗಳು ಮತ್ತು ಪರಿಸರ ಸಮಸ್ಯೆಗಳ ಐದು ಅಂಶಗಳ ಕುರಿತು ಶಾಸಕರಿಗೆ ವಿವರಿಸಲಾಗಿದೆ ಎಂದು ಗಾಡ್ಗೆ ಹೇಳಿದ್ದಾರೆ.

Latest Indian news

Popular Stories