ಹೂಡೆಯಲ್ಲಿ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಕಾರ್ಯಕ್ರಮ

ಉಡುಪಿ: ಇಲ್ಲಿನ ಹೂಡೆಯ ದಾರುಸ್ಸಲಾಮ್ ಮದ್ರಸಾದಲ್ಲಿ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್‌ ಉಡುಪಿ ರೀಜನಲ್ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ ಇದರ ಸಹಭಾಗಿತ್ವದಲ್ಲಿ “ಮಾದಕ ದ್ರವ್ಯ ವಿರುದ್ಧ ಜಾಗೃತಿ ಕಾರ್ಯಕ್ರಮ” ನಡೆಯಿತು.

ಎಸ್.ಎಮ್.ಎ ಉಡುಪಿ ರೀಜನಲ್ ಅಧ್ಯಕ್ಷರಾದ ಹಬೀಬ್ ಅಲಿ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯದೀಶರಾದ ಶ್ರೀಮತಿ ಶರ್ಮಿಳಾ ಎಸ್. ಕಾರ್ಯವನ್ನು ಉದ್ಘಾಟಿಸಿದರು. ಹೂಡೆ ದಾರುಸ್ಸಲಾಮ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮುಹಮ್ಮದ್ ರಖೀಬ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್.ವೈ. ಎಸ್ ರಾಜ್ಯ ಸಮಿತಿ ಕೋಶಾಧಿಕಾರಿ ಹಂಝತ್ ಹೆಜಮಾಡಿ ಕೋಡಿ ಭಾಷಣ ಮಾಡಿದರು. ಎಸ್. ಜೆ. ಎಮ್ ಉಡುಪಿ ರೇಂಜ್ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಮದನಿ, ಹೂಡೆ ದಾರುಸ್ಸಲಾಮ್ ಮದ್ರಸಾ ಪ್ರಿನ್’ಪಾಲರಾದ ಇಸ್ಮಾಈಲ್ ನ’ಈಮಿ ಮಂಗಳಪೇಟೆ, ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಇದರ ಅಧ್ಯಕ್ಷರಾದ ಅಶ್ರಫ್. ಜಿ, ಉಡುಪಿ ರೀಜನಲ್ ಎಸ್. ಎಮ್. ಎ. ಪ್ರಧಾನ ಕಾರ್ಯದರ್ಶಿ ಕೆ.ಎಸ್.ಇಬ್ರಾಹೀಮ್ ಸಖಾಫಿ, ಕೋಶಾಧಿಕಾರಿ ವೈ, ಎಂ. ಇಲಿಯಾಸ್ ಕಟಪಾಡಿ ಮುಂತಾದವರು ಉಪಸ್ಥಿತರಿದ್ದರು.

Latest Indian news

Popular Stories