
Featured StorySports
ದಕ್ಷಿಣ ಆಫ್ರಿಕಾಕ್ಕೆ ಸುಲಭ ಜಯ: ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದ ಅಫ್ಘಾನಿಸ್ತಾನ
ವಿಶ್ವಕಪ್ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನ ಸೋಲಿನೊಂದಿಗೆ ತನ್ನ ಅಭಿಯಾನ ಮುಗಿಸಿದೆ. ದಕ್ಷಿಣ ಆಫ್ರಿಕಾ ಐದು ವಿಕೆಟ್ ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಅಝ್ಮತುಲ್ಲಾ ಅವರ ಅಜೇಯ 97 ರನ್ ಗಳ ಸಹಾಯದಿಂದ 244 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪಂದ್ಯದ ಮಧ್ಯದಲ್ಲಿ ಸ್ಬಲ್ಪ ತಡಬಡಾಯಿಸಿದರೂ ದುಸ್ಸೇನ್ ಅವರ ಸಮಯೋಚಿತ ಆಟದಿಂದಾಗಿ ಗೆಲುವಿನ ದಡ ಸೇರಿತು. ಈ ಮೂಲ ವಿಶ್ವ ಕಪ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಮುಹಮ್ಮದ್ ನಬಿ ಮತ್ತು ರಶೀದ್ ಖಾನ್ ಅಫ್ಘಾನಿಸ್ತಾನ ಪರ ತಲಾ ಎರಡು ವಿಕೆಟ್ ಪಡೆದರು.
ನಾಳಿನ ಪಂದ್ಯ: ಆಸ್ಟ್ರೇಲಿಯಾ vs ಬಾಂಗ್ಲಾದೇಶ
ಪಾಕಿಸ್ತಾನ vs ಇಂಗ್ಲೆಂಡ್




