ಸಹಾರಾ ಠೇವಣಿದಾರರಿಗೆ ಮರು ಪಾವತಿಸುವ ಪ್ರಕ್ರಿಯೆ ಆರಂಭ

ನವದೆಹಲಿ: ಸಹಾರಾ ಗ್ರೂಪ್‌ನ ನಾಲ್ಕು ಕೋ-ಅಪರೇಟಿವ್‌ ಸೊಸೈಟಿಗಳಲ್ಲಿ ಸಿಲುಕಿಕೊಂಡಿದ್ದ 5,000 ಕೋಟಿ ರೂ.ಗಳನ್ನು ಠೇವಣಿದಾರರಿಗೆ ಮರುಪಾವತಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮಂಗಳವಾರ ಆರಂಭಿಸಿದೆ.

ಈ ಕ್ರಮವು ಕಷ್ಟಪಟ್ಟು ಉಳಿತಾಯ ಮಾಡಿದ್ದ ಹಣ ಮರುಪಾವತಿಗಾಗಿ ಕಾಯುತ್ತಿರುವ 10 ಕೋಟಿ ಸಣ್ಣ ಉಳಿತಾಯದಾರರು ನಿಟ್ಟುಸಿರು ಬಿಡುವಂತೆ ಮಾಡಿದೆ. ಮುಂದಿನ 9 ತಿಂಗಳಲ್ಲಿ 10 ಕೋಟಿ ಠೇವಣಿದಾರರಿಗೆ ಹಣ ಹಿಂತಿರುಗಿಸಲಾಗುವುದು ಎಂದು ಮಾ.29ರಂದು ಕೇಂದ್ರ ಸರ್ಕಾರ ಹೇಳಿತ್ತು. ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಮಂಗಳವಾರ “ಸಿಆರ್‌ಸಿಎಸ್‌-ಸಹಾರಾ ರೀಫ‌ಂಡ್‌ ಪೋರ್ಟಲ್‌’ಗೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, “ಉಳಿದ ಠೇವಣಿದಾರರ ಹಣ ಹಿಂತಿರುಗಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ಗೆ ಮತ್ತೂಂದು ಮೇಲ್ಮನವಿ ಸಲ್ಲಿಸಲಾಗುವುದು,’ ಎಂದು ತಿಳಿಸಿದರು.

Latest Indian news

Popular Stories