Featured StoryDakshina Kannada

ಸಾವರ್ಕರ್ ಫೋಟೋ ತೆರವುಗೊಳಿಸಲು ಮತ್ತು ಯುಟಿ ಕಾದರ್ ಉದ್ದೇಶಿಸಿ ಫೇಸ್‌ಬುಕ್ ಬರಹ: SDPI ಮುಖಂಡ ಪೊಲೀಸ್ ವಶಕ್ಕೆ

ಮಂಗಳೂರು: ಸಭಾಧ್ಯಕ್ಷ ಯು.ಟಿ.ಖಾದರ್ ವಿರುದ್ಧ ಅವಹೇಳನ ಆರೋಪದಡಿಯಲ್ಲಿ ಎಸ್ ಡಿಪಿಐ ಪಕ್ಷದ ಮುಖಂಡನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬುನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ತೆರವು ವಿಚಾರದಲ್ಲಿ ಸ್ಪೀಕರ್ ಖಾದರ್ ಮಾತನಾಡಿ ‘ನನ್ನ ಕೆಲಸ ಜೋಡಿಸುವುದು, ಕಿತ್ತು ಬಿಸಾಕುವುದಲ್ಲ’ ಎಂದಿದ್ದರು.

ಇದಕ್ಕೆ ವಿರುದ್ದವಾಗಿ ಫೇಸ್ ಬುಕ್ ನಲ್ಲಿ ಖಾದರ್ ವಿರುದ್ದ ಪೋಸ್ಟ್ ಹಾಕಿದ್ದ ರಿಯಾಜ್, ‘ಇಷ್ಟೇ… ಅದ್ಯಾವ ಪರಿಸರ ಹೇಳಿ, ಚಪ್ಪಲಿ ನೆಕ್ಕಿ ಸಾವರ್ಕರ್ ನ ಫೋಟೋವನ್ನು ಇಟ್ಟು ಜೋಡಿಸುತ್ತಿದ್ದ ಪರಿಸರ’.

‘ಈ ವ್ಯಕ್ತಿಯಿಂದ RSS ವಿರುದ್ಧ ನಿಲ್ಲಲು ಈ ಆಯಸ್ಸು ಪೂರ್ತಿ ಅಧಿಕಾರದಲ್ಲಿದ್ದರೂ ಸಾಧ್ಯವಿಲ್ಲ’

‘ಚುನಾವಣೆಯಲ್ಲಿ ಕೇಳ್ತಿದ್ರಲ್ಲಾ SDPI ಯಾಕೆ ಒಬ್ಬ ಮುಸ್ಲಿಂ MLA ವಿರುದ್ಧ ಸ್ಪರ್ಧೆ ಮಾಡುವುದು ಅಂತ’

‘ನೋಡಿ ಉತ್ತರ ಸ್ಪಷ್ಟವಿದೆ ದೇಶದ್ರೋಹಿ, ಸಂವಿಧಾನ ವಿರೋಧಿ, ಜಾತ್ಯತೀತ ವಿರೋಧಿ, ಕೋಮುವಾದಿ RSS ಜೊತೆ ಹೊಂದಾಣಿಕೆ ಮಾಡಿಕೊಂಡು ಈ ರೀತಿ ಜೋಡಿಸಲು ಹೊರಟಿರುವುದಕ್ಕೆ’

‘ಎಂದಾದರೂ ಒಂದು ದಿನ SDPI ಅದೊರಳಗೆ ಲಗ್ಗೆ ಇಟ್ಟರೆ, ಕಿತ್ತು ಬಿಸಾಕಿಯೇ ಬಿಸಾಕಲು ಸದನದಲ್ಲಿ ಹೋರಾಟ ಮಾಡಿಯೇ ಮಾಡುತ್ತೇವೆ’

‘ಅದ್ಯಾವ ವ್ಯಕ್ತಿ ಸಭಾಧ್ಯಕ್ಷ ಆಗಿದ್ದರೂ ಕೂಡ’

‘ಈ ಸಭಾಧ್ಯಕ್ಷರಿಗೆ ಚಾಲೆಂಜ್ ಕಿತ್ತು ಬಿಸಾಕಿ, ಟಿಪ್ಪು ಭಾವಚಿತ್ರ ಧಮ್ಮಿದ್ದರೆ ಅಳವಡಿಸಿ’

ಈ ರೀತಿ ಖಾದರ್ ವಿರುದ್ದ ಪೋಸ್ಟ್ ಮಾಡಿದ್ದ ರಿಯಾಜ್ ಕಡಂಬು ಅವರನ್ನು ಬಂಧಿಸಿ ಸದ್ಯ ಮಂಗಳೂರಿನ ಉರ್ವಾ ಠಾಣೆಯಲ್ಲಿ ರಿಯಾಜ್ ವಿಚಾರಣೆ ನಡೆಸಲಾಗುತ್ತಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button