ದನಕರುಗಳ ಹೆಸರಲ್ಲಿ ಹಣ ಲೂಟಿ ಹೊಡೆದ ಪಂಚಾಯತ ಅಧಿಕಾರಿಗಳು

ಬೀದರ್ :ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲೆಂದು ನಿರ್ಮಿಸಬೇಕಿದ್ದ ನೀರಿನ ತೊಟ್ಟಿ (ಹೌದು) ನಿರ್ಮಿಸದೇ ಹಣ ಲೂಟಿ ಹೊಡೆದಿದ್ದಾರೆ ಎಂಬ ಆರೋಪ ಬೀದರ್ ಜಿಲ್ಲೆ ಔರಾದ್ ತಾಲೂಕಿನ ಎಕಲಾರ ಗ್ರಾಮ ಪಂಚಾಯತ್‌ನಲ್ಲಿ ಕೇಳಿ ಬಂದಿದೆ.

ಎಕಲಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಳಜಾಪುರ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕದ ಬಳಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ (ಹೌದು) ನಿರ್ಮಾಣ ಮಾಡಲಾಗಿದೆ ಎಂದು 14 ನೇ ಹಣಕಾಸು ಯೋಜನೆಯಲ್ಲಿ 73 ಸಾವಿರ ಹಣ ಪಾವತಿ ಮಾಡಲಾಗಿದೆ.

ನಕಲಿ ಬಿಲ್ ಮೂಲಕ ಹಣ ಎಗರಿಸಿದ ಕುರಿತು ಕ್ರಮ ಕೈಗೊಳ್ಳುವಂತೆ ಔರಾದ್ ತಾಲೂಕಿನ ತಾಲೂಕು ಪಂಚಾಯತ್ ಅಧಿಕಾರಿಗೆ ಡಿಸೆಂಬರ್ 2 ರಂದೇ ಮನವಿ ಮಾಡಿದ್ರು ಯಾವುದೇ ಕ್ರಮ ಕೈಗೊಂಡಿಲ್ಲ.

IMG 20231212 WA0004 2 Bidar

IMG 20231212 WA0003 Bidar

ಅನೇಕ ಕಾಮಗಾರಿಗಳನ್ನ ಮಾಡದೇ ಹಣ ಲೂಟಿ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಸಿದ್ದಾರೆ. ಇನ್ನು ಘಟನೆ ಸಂಬಂಧ ಪ್ರತಿಕ್ರಿಯೆ ಕೇಳಲು ಔರಾದ್ ಇಓ ಬಿರೇಂದ್ರ ಬಳಿ ಹೋದ್ರೆ ಗರಂ ಆಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಅಕ್ರಮಕ್ಕೆ ಸಾಥ್ ನೀಡ್ತಿದ್ದಾರಾ ಎಂಬ ಮಾತು‌ ಕೇಳಿ ಬರುತ್ತದೆ.

Latest Indian news

Popular Stories