
ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ನೋದಿ ಮತ್ತು ಭದ್ರತಾ ಪಡೆಗೆ ಧನ್ಯವಾದ ಸಲ್ಲಿಸಿದ ಶೆಹ್ಲಾ ರಶೀದ್
ಮಧ್ಯಪ್ರಾಚ್ಯದಲ್ಲಿನ ಘಟನೆಗಳನ್ನು ನೋಡಿದಾಗ, ನಾವು ಭಾರತೀಯರಾಗಿ ಎಷ್ಟು ಅದೃಷ್ಟವಂತರು ಎಂದು ಇಂದು ನನಗೆ ಅರಿವಾಗುತ್ತದೆ. ಭಾರತೀಯ ಸೇನೆ ಮತ್ತು ಭದ್ರತಾ ಪಡೆಗಳು ನಮ್ಮ ಸುರಕ್ಷತೆಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ ಎಂದು ಶೆಹ್ಲಾ ರಶೀದ್ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ನೋದಿ, ಅಮಿತ್ ಶಾರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಧಾನ ಮಂತ್ರಿಯ ತೀವ್ರ ಟೀಕಾಕಾರರಾಗಿದ್ದ ಶೆಹ್ಲಾ ನಡೆ ಅಚ್ಚರಿ ಮೂಡಿಸಿದೆ.
ಮಧ್ಯಪ್ರಾಚ್ಯ ಬಿಕ್ಕಟ್ಟು ತೋರಿಸಿದಂತೆ ಭದ್ರತೆಯಿಲ್ಲದೆ ಶಾಂತಿ ಅಸಾಧ್ಯ. ಭಾರತೀಯ ಸೇನೆಯ ಜಮ್ಮು ಕಾಶ್ಮೀರ ಪೋಲೀಸ್ ಕೆಚ್ಚೆದೆಯ ಸಿಬ್ಬಂದಿ ಕಾಶ್ಮೀರದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಪಾರ ತ್ಯಾಗವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಒಪ್ಪಿಕೊಳ್ಳಲು ಅನಾನುಕೂಲವಾಗಿದ್ದರೂ, ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ದಾಖಲೆ ಸುಧಾರಿಸಿದೆ.ಸರ್ಕಾರದ ಸ್ಪಷ್ಟ ನಿಲುವು ಒಟ್ಟಾರೆ ಜೀವಗಳನ್ನು ಉಳಿಸಲು ಸಹಾಯ ಮಾಡಿದೆ.
https://twitter.com/Shehla_Rashid/status/1691389570414497792?t=PFAy-wRfNXW8JDIAeP23SA&s=19




