ಶಿರೂರು: ಮನೆ, ಕಾರು, ದ್ವಿಚಕ್ರ ವಾಹನಕ್ಕೆ ಬೆಂಕಿ – ಲಕ್ಷಾಂತರ ರೂಪಾಯಿ ನಷ್ಟ

ಶಿರೂರು: ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ್ದು ಕಾರು ಮತ್ತು ದ್ವಿಚಕ್ರ ವಾಹನ ಸುಟ್ಟು ಭಸ್ಮವಾಗಿದೆ.

ಬುಖಾರಿ ಕಾಲೋನಿಯಾ ಸಿನಾ ಫರ್ಹಿನ್ (ರಹಮತ್ ಪೆರ್ಲಕಡಿ, ಹೂಡೆಯವರ ಸಂಬಂಧಿ) ಅವರಿಗೆ ಸೇರಿದ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು ಮನೆಯ ಹಾಲ್ ಸಂಪೂರ್ಣ ಸುಟ್ಟು ಕರಕಲಾಗಿದೆ.

IMG 20231123 102232 Featured Story, Udupi IMG 20231123 WA0024 Featured Story, Udupi IMG 20231123 WA0031 Featured Story, Udupi IMG 20231123 WA0025 Featured Story, Udupi

ಮಧ್ಯ ರಾತ್ರಿ 1.30 ರ ಹೊತ್ತಿಗೆ ಮಲಗಿಕೊಂಡಿರುವಾಗ ಮನೆಯ ಹೊರಗಡೆ ಬೆಂಕಿ ಹತ್ತಿ ಕೊಂಡು ಉರಿಯುತ್ತಿದ್ದನ್ನು ನೋಡಿ ನೆರೆಕರೆಯವರಿಗೆ ವಿಚಾರ ತಿಳಿಸಿ ನೋಡಿದಾಗ ಮನೆಗೆ ತಾಗಿ ಕೊಂಡಿರುವ ಶೆಡ್ ನಲ್ಲಿ ನಿಲ್ಲಿಸಿದ ಕೆ.ಎ.20 ಎಂ.ಇ 0870 ಮಾರುತಿ ಶಿಪ್ಟ್ ಕಾರಿಗೆ ಮತ್ತು ಕೆಎ,20 ಇಏ 6032 ನೇ ಸುಜುಕಿ ಮೋಟಾರು ಸೈಕಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಉರಿದು ಸಂಪೂರ್ಣವಾಗಿ ಸುಟ್ಟು ಕರಕಲಾಗಿ ಹೋಗಿದೆ

ಈ ಅವಘಡದಿಂದಾಗಿ ಸುಮಾರು ಕಾರಿಗೆ 11,50,000/- ರೂಪಾಯಿ, ಮೋಟಾರು ಸೈಕಲಿಗೆ 80,000/- ರೂ. ನಷ್ಟ ಆಗಿದ್ದು, ಮನೆಗೆ ಅಳವಡಿಸಿದ ಏರ್ ಕಂಕಂಡಿಶನ್ ರ್ ಸುಟ್ಟು ಹೋಗಿ 40,000/- ಅಲ್ಲದೇ ಬೆಂಕಿ ಅನಾಹುತದಿಂದ ಮನೆಯ ಗೋಡೆ, ಮತ್ತು ಪೈಪ್ ಲೈನ್, ಹಾನಿಯಾಗಿ
ಹಾಗೂ ಕಿಟಕಿ ಹಾಗೂ ಗಾಜುಗಳಿಗೆ ಮತ್ತು ಕೋಣೆಯಲ್ಲಿದ್ದ ಮರದ ಮಂಚ, ಬೆಡ್ ಗೆ ಹಾನಿಯುಂಟಾಗಿ ಸುಮಾರು 4,00000/ ಲಕ್ಷ ಒಟ್ಟು 16,70,000/- ನಷ್ಟ ಉಂಟಾಗಿರುತ್ತದೆ ಎಂದು ಮನೆಯವರು ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories