Featured StoryState News

ಜೈ ಶ್ರೀ ರಾಮ್ ಘೋಷಣೆಯಿಂದ ಯಾರಿಗೂ ಸಮಸ್ಯೆಯಿಲ್ಲ; ಜೈ ಶ್ರೀ ರಾಮ್ ಹೇಳದವರು ಈ ದೇಶದಲ್ಲಿರಬಾರದು ಎಂಬ ಮನೋಭಾವ ಅಪಾಯಕಾರಿ – ಶಿವಸುಂದರ್

ಮಡಿಕೇರಿ: ಇಂದು ಸೇರಿರುವ ಉದ್ದೇಶ ಕೇವಲ ಜ್ಞಾನ ವ್ಯಾಪಿ ಮಸೀದಿಯನ್ನು ಉಳಿಸುವುದಕ್ಕಾಗಿ ಅಲ್ಲ ದೇಶದಲ್ಲಿನ ಮಸೀದಿಗಳ ಮೇಲೆ ನಡೆಯುತ್ತಿರುವ ಆಕ್ರಮಣಗಳ ತಡೆಯುವುದರೊಂದಿಗೆ ದೇಶವನ್ನು ಉಳಿಸುವ ಪ್ರಶ್ನೆಯಾಗಿದೆ ಎಂದು ಶಿವ ಸುಂದರ್ ಹೇಳಿದರು.

ಅವರು ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮಡಿಕೇರಿ ಜಮಾಅತ್ ಒಕ್ಕೂಟ ಹಮ್ಮಿ ಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈ ದೇಶ ಯಾವುದೇ ಒಂದು ಸೀಮಿತ ವರ್ಗಕ್ಕೆ ಸೇರಿದ ಸೊತ್ತಲ್ಲ. ಈ ದೇಶದಲ್ಲಿ ಯಾರೆಲ್ಲಾ ಹುಟ್ಟಿ ಬೆಳೆದಿದ್ದಾರೋ ಅವರದ್ದಾಗಿದೆ.ಪ್ರಸ್ತುತ ಈ ಧೇಶದಲ್ಲಿ ನಡೆಯುತ್ತಿರವುದು ದರ್ಮಧಾರಿತ ಅಲ್ಲ.ಇದೊಂದು ಶುದ್ದ ರಕ್ತ ರಾಜಕಾರಣವಾಗಿದೆ ಎಂದರು.

ಎಲ್ಲಾ ವಕ್ಪ್ ಆಸ್ತಿಗಳನ್ನು ಸರ್ಕಾರ ಸಂರಕ್ಷಿಸುವುದು.‌places of worship act 1991 ಪಾಲನೆ ಮಾಡುವುದು. ಮುಸಲ್ಮಾನರ 2ಬಿ ಮೀಸಲಾತಿಯನ್ನು ಶೇಕಡ 8 ಕ್ಕೆ ಏರಿಸಿ ಜಾರಿಗೆತರುವುದು. ಬಜೆಟ್ ಅಧಿವೇಶನದಲ್ಲಿ ಮುಸಲ್ಮಾನರಿಗೆ ರೂ.10000 ಕೋಟಿ ಮೀಸಲಿಡುವುದು ಇನ್ನಿತರ ಬೇಡಿಕೆಗಳೊಂದಿಗೆ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮಡಿಕೇರಿ ಜಮಾಅತ್ ಒಕ್ಕೂಟ ಹಮ್ಮಿ ಕೊಂಡ ಪ್ರತಿಭಟನೆ ಸಭೆಯಲ್ಲಿ ಖ್ಯಾ ತ ಅಂಕಣಗಾರರು ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವ ಸುಂದರ್ ರವರು ಪ್ತತಿಭಟನಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಜೈ ಶ್ರೀ ರಾಮ್ ಘೋಷಣೆ ಯಾರಿಗೂ ಸಮಸ್ಯೆಯಿಲ್ಲ. ಬದಲಾಗಿ ಜೈ ಶ್ರೀ ರಾಮ್ ಹೇಳದವರು ಈ ದೇಶದಲ್ಲಿರಬಾರದು ಎಂದು ಮನೋಭಾವವಿದೆಯಲ್ಲ ಅದು ಅಪಾಯಕಾರಿ ಸಿದ್ದಾಂತವಾಗಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ. ನಝೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ಅಮೀನ್ ಮುಹ್ಸಿನ್ ,ಮಡಿಕೇರಿ ಮಕ್ಕಾ ಮಸೀದಿ ಧರ್ಮ ಗುರುಗಳಾದ ಮೌಲಾನ ಹಕೀಮ್ ಹಾಗೂ ಒಂಬತ್ತು ಮಸೀದಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು..

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button