ರೈತರದ್ದು ರಾಜಕೀಯ ಪ್ರೇರಿತ ಪ್ರತಿಭಟನೆ – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಉಡುಪಿ:ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಕೇಂದ್ರ ಸರ್ಕಾರದ ವಿರುದ್ಧ ರೈತರ ತೀವ್ರ ಪ್ರತಿಭಟನೆ ಪ್ರತಿಕ್ರಿಯೆ ನೀಡಿದರು.

“ಇದು ರಾಜಕೀಯ ಪ್ರೇರಿತ ಪ್ರತಿಭಟನೆಯಾಗಿದೆ. ಸ್ವಾಮಿನಾಥನ್ ಕಮಿಟಿ 207 ಶಿಫಾರಸುಗಳನ್ನು ಮಾಡಲಾಗಿತ್ತು. ಮೋದಿ ಸರ್ಕಾರ ಎಲ್ಲಾ ಶಿಫಾರಸುಗಳನ್ನು ಈಡೇರಿಸಿದೆ” ಎಂದರು

2006ರಲ್ಲಿ ವರದಿ ತಯಾರಾಗಿತ್ತು, ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು.ಶೀತಲೀಕರಣ ಘಟಕ ಮಾಡುವ ಬದಲು ಶಿಫಾರಸ್ಸುಗಳನ್ನು ಶೀತಲೀಕರಣ ಘಟಕದಲ್ಲಿ ಇರಿಸಲಾಗಿತ್ತು. ಮೋದಿ ಪ್ರಧಾನಿಯಾದ ಕೂಡಲೇ ಸ್ವಾಮಿನಾಥನ್ ಭೇಟಿಯಾಗಿ ಭಾವನೆ ಅರ್ಥ ಮಾಡಿಕೊಂಡು ಎಲ್ಲವನ್ನೂ ಈಡೇರಿಸಿದ್ದಾರೆ ಎಂದು ಹೇಳಿದರು.

22 ಬೆಳೆಗಳಿಗೆ ಖರ್ಚಿನ ಒಂದೂವರೆ ಪಟ್ಟು ಹೆಚ್ಚು ಕೊಟ್ಟು ಎಂ ಎಸ್ ಪಿ ಘೋಷಣೆ ಮಾಡಲಾಗಿದೆ. ರಾಜಕೀಯ ಪ್ರೇರಿತವಾಗಿ ಚುನಾವಣೆ ಹತ್ತಿರ ಇರುವಾಗ ರೈತರು ಡೆಲ್ಲಿಗೆ ಬಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾಡುತ್ತಿರುವುದು ಅಂತರಾಷ್ಟ್ರೀಯ ಪಿತೂರಿ ಇದಾಗಿದೆ. ಮೂರು ಸುತ್ತಿನ ಚರ್ಚೆಯಾಗಿದೆ- ರೈತರ ಜೊತೆ ಮತ್ತೆ ಚರ್ಚೆಗೆ ಈಗಲೂ ಸಿದ್ದವಿದ್ದೇವೆ ಎಂದರು

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಇಂಗಿತ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ರಾಜ್ಯದ ಬೇರೆ ಬೇರೆ ಕ್ಷೇತ್ರಗಳಲ್ಲಿ ನನ್ನ ಹೆಸರು ಬರುತ್ತಾ ಇದೆ. ಶೋಭಾ ಆ ಕ್ಷೇತ್ರಕ್ಕೆ ಈ ಕ್ಷೇತ್ರಕ್ಕೆ ಎಂಬ ಐದಾರು ಕ್ಷೇತ್ರದ ಹೆಸರು ಕೇಳಿ ಬರುತ್ತಿದೆ. ಉಡುಪಿ ಚಿಕ್ಕಮಗಳೂರು ನನ್ನ ಕ್ಷೇತ್ರ- ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದರು.

ನನ್ನ ಬಗ್ಗೆ ಗೊತ್ತೇ ಇಲ್ಲದಾಗ ಉಡುಪಿ ಚಿಕ್ಕಮಗಳೂರು ಜನ ನನ್ನನ್ನು ಗೆಲ್ಲಿಸಿದ್ದಾರೆ. ಹಾಗಾಗಿ ನಾನು ಬೇರೆ ಕಡೆ ಹೋಗುವ ಪ್ರಶ್ನೆ ಬರುವುದಿಲ್ಲ. ಪಾರ್ಟಿಯ ನಿರ್ಧಾರಕ್ಕೆ ಪಾರ್ಟಿ ಕೊಡುವ ಸೂಚನೆಗೆ ನಾನು ಬದ್ಧಳಾಗಿದ್ದೇನೆ ಎಂದರು.

ಈ ಬಾರಿ ಅಭಿವೃದ್ಧಿ ಆಧಾರದಲ್ಲಿ ನಾನು ವೋಟು ಕೇಳುತ್ತೇನೆ. ಹಿಂದಿನ ಸಂಸದರು ಹಿಂದಿನ ಸರ್ಕಾರ ಏನು ಮಾಡಿತ್ತು?. ಮೋದಿ ಸರ್ಕಾರದ ಅವಧಿಯಲ್ಲಿ ಏನಾಗಿದೆ ಎಂದು ಹೇಳಿ ವೋಟ್ ಕೇಳುತ್ತೇನೆ ಎಂದರು

ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಅವರು, ಯಾರು ಕಾಂಗ್ರೆಸ್ಸಿಗೆ ಹೋಗ್ತಾರೆ ಯಾರು ಬಿಜೆಪಿಯಲ್ಲಿ ಇರ್ತಾರೆ ನನಗೆ ಗೊತ್ತಿಲ್ಲ. ಪಕ್ಷದಿಂದ ಲಾಭ ಪಡೆದು ಪಕ್ಷ ತ್ಯಜಿಸಿದರೆ ಅವರಿಗೆ ನಷ್ಟ. ಅಧಿಕಾರದಲ್ಲಿದ್ದಾಗ ಬರ್ತೀವಿ ಇಲ್ಲದಾಗ ಹೋಗ್ತಿವಿ ಎಂಬುದು ಬಿಜೆಪಿಯ ಮಾನಸಿಕತೆ ಅಲ್ಲ ಎಂದರು.

ಯಾರೂ ಪಕ್ಷವನ್ನು ಬಿಡಬೇಡಿ ಎಂದು ವಿನಂತಿಸುತ್ತೇನೆ.‌ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ, ವಿಶ್ವನಾಯಕ ಮಾಡುವ ಅವಕಾಶ ಸಿಗಲಿದೆ ಎಂದೆಉ.

ಸಿದ್ದರಾಮಯ್ಯ 15ನೇ ದಾಖಲೆಯ ಬಜೆಟ್:

ಸಿದ್ದರಾಮಯ್ಯನ ಬಳಿ ಹಣ ಇಲ್ಲ. ಬೊಕ್ಕಸದ ಹಣವನ್ನು ಗ್ಯಾರಂಟಿಗೆ ಖರ್ಚು ಮಾಡಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿಗಳು ಕೂಡ ನಡೆಯುತ್ತಿಲ್ಲ ಎಂದು ಹೇಳಿದರು.

ಉಚಿತ ಬಸ್ ಎಂದು ಹೇಳಿ 80% ಬಸ್ ನಿಲ್ಲಿಸಿದ್ದಾರೆ.‌ ಬಸ್ಸಿಗೆ ಡೀಸೆಲ್ ಹಾಕಲು ಹಣ ಇಲ್ಲ, ಸಂಬಳ ಕೊಡಲು ಹಣ ಇಲ್ಲ. ನ್ಯಾಯಾಧೀಶರಿಗೆ ಎರಡು ತಿಂಗಳು ತಡವಾಗಿ ಸಂಬಳ ಕೊಟ್ಟಿದ್ದಾರೆ. ಚುನಾವಣೆಯ ಉದ್ದೇಶವಾಗಿಟ್ಟುಕೊಂಡು ಘೋಷಿಸುವ ಸುಳ್ಳು ಬಜೆಟ್ ಘೋಷಣೆಯಾಗಲಿದೆ ಎಂದರು.

Latest Indian news

Popular Stories