ಪ್ರಶ್ನೋತ್ತರ ಕಲಾಪಕ್ಕೆ ಅಡ್ಡಿ ಪಡಿಸಿದ ಬಿಜೆಪಿ ನಾಯಕರು

ಬೆಂಗಳೂರು: ಎರಡನೇ ದಿನದ ಅಧಿವೇಶನ ಆರಂಭವಾಗಿದ್ದು ವಿರೋಧ ಪಕ್ಷದ ನಾಯಕನಿಲ್ಲದೆ ಇಂದು ಭಾಗಿಯಾದ ಬಿಜೆಪಿ ಕಾಂಗ್ರೆಸ್ ಗ್ಯಾರಂಟಿಗಳ ವಿರುದ್ದ ಹರಿಯಾಯಲು ಮುಂದಾಗಿದೆ.

ಸ್ಪೀಕರ್ ಶಾಸಕರ ಪ್ರಶ್ನೋತ್ತರ ಕಲಾಪ ನಡೆಸುವಾಗ ಏಕಾಏಕಿ ಗದ್ದಲ ಎಬ್ಬಿಸಿದ ಬಿಜೆಪಿ ಶಾಸಕರು ಗ್ಯಾರಂಟಿಗಳ ಕುರಿತು ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಗದ್ದಲ ಎಬ್ಬಿಸಿದರು. ಆದರೆ ಶಾಸಕರ ಪ್ರಶ್ನೋತ್ತರ ನಂತರ ಅವಕಾಶ ಕಲ್ಪಿಸುವುದಾಗಿ ಸ್ಪೀಕರ್ ಯುಟಿ ಕಾದರ್ ಹೇಳಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಿ ನಿಯಮ ತಿಳಿಸಲು ಮುಂದಾದರು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಪ್ರಶ್ನೋತ್ತರ ನಂತರ ಚರ್ಚೆ ನಡೆಸೋಣ ಎಂದು ಪಟ್ಟು ಹಿಡಿದರು.

Latest Indian news

Popular Stories