ಬಿಜೆಪಿಯವರು ಗಾಬರಿಯಾಗುತ್ತಿರುವುದು ಯಾಕೆ, ನಿಮಗೆ ಜನ ರೆಸ್ಟ್ ಮಾಡಲು ಕಳುಹಿಸಿದ್ದರೆ ರೆಸ್ಟ್ ಮಾಡಿ – ಡಿಕೆಶಿ ವ್ಯಂಗ್ಯ

ಬೆಂಗಳೂರು: ಯಡಿಯೂರಪ್ಪ ಅವರಿಗೆ ಒಳ್ಳೆಯದಾಗಲಿ. ಅವರು ನಮ್ಮ ಕಾರ್ಯಕ್ರಮಗಳನ್ನು ಒಳ್ಳೆಯ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ನಾವು ತಪ್ಪು ಮಾಡಿದ್ದರೆ ತಿದ್ದಲಿ.ನಾವು ಏನು ಅನಾಹುತ ಮಾಡಿದ್ದೇವೆ ಎಂದು ಪ್ರತಿಭಟಿಸುವುದು. ಜನ ಅವರಿಗೆ ರೆಸ್ಟ್ ಮಾಡಲು ಹೇಳಿದ್ದಾರೆ.ಅವರು ರೆಸ್ಟ್ ಮಾಡಲಿ, ನಾವು ಆಡಳಿತ ಮಾಡುತ್ತೇವೆ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇವೆ. ಅವರು ಕೊಟ್ಟ ಸಲಹೆಗಳನ್ನೆಲ್ಲ ಸ್ವೀಕರಿಸಿದ್ದೇವೆ ಎಂದರು.

ಯಾವ ಲಂಚನೂ ಇಲ್ಲ, ಏನು ಇಲ್ಲ. ಕುಮಾರ ಸ್ವಾಮಿ ಬಳಿ ದಾಖಲೆ ಇದ್ದರೆ ಲೋಕಾಯುಕ್ತ ಬಳಿ ಕೊಡಲಿ. ಚುನಾವಣೆಯಲ್ಲಿ ನಂಬರ್ ಕಡಿಮೆಯಾಗಿದೆ ಎಂದು ಬೇಸರದಿಂದ ಮಾತನಾಡುತ್ತಿದ್ದರೆ ಎಂದರು.

Latest Indian news

Popular Stories