
Featured StoryDakshina Kannada
ಸಾಲಿಡಾರಿಟಿ ಯೂತ್ ಮೂಮೆಂಟ್ ಜಿಲ್ಲಾಧ್ಯಕ್ಷನಾಗಿ ನಿಝಾಮುದ್ದೀನ್ ಉಮರ್, ಜಿಲ್ಲಾ ಕಾರ್ಯದರ್ಶಿಯಾಗಿ ಎಮ್.ದ್ಯಾನೀಶ್ ಆಯ್ಕೆ
ಮಂಗಳೂರು: ಸಾಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾಗಿರುವ ಶ್ರೀ ಲಬೀದ್ ಆಲಿಯಾ ರವರ ನೇತೃತ್ವದಲ್ಲಿ ಮಂಗಳೂರು ನಗರದ ಹಿದಾಯತ್ ಸೆಂಟರ್ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ನಿಝಾಮುದ್ದೀನ್ ಉಮರ್ ರವರನ್ನು ಚುನಾಯಿಸಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಎಂ. ದಾನಿಶ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಜಮಾಅತೇ ಇಸ್ಲಾಮೀ ಜಿಲ್ಲಾಧ್ಯಕ್ಷ ಅಮೀನ್ ಅಹ್ಸನ್, ಸಾಲಿಡಾರಿಟಿ ಹಾಲಿ ಅಧ್ಯಕ್ಷ ತಫ್ಲೀಲ್ ಉಪ್ಪಿನಂಗಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




