ರ‍್ಯಾಗಿಂಗ್​ನಿಂದ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

ಹೈದರಾಬಾದ್: ರ‍್ಯಾಗಿಂಗ್​ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪಿಜಿ ವೈದ್ಯಕೀಯ ವಿದ್ಯಾರ್ಥಿನಿ 26 ವರ್ಷದ ಧಾರಾವತಿ ಪ್ರೀತಿ ಇಂದು ರಾತ್ರಿ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ನಿಮ್ಸ್) ಮೃತಪಟ್ಟಿದ್ದಾರೆ.

ವರದಿಯ ಪ್ರಕಾರ, ವೈದ್ಯ ವಿದ್ಯಾರ್ಥಿನಿ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಎತ್ತಿದ್ದರಿಂದ ಆಸ್ಪತ್ರೆಯಲ್ಲಿ ಲಘು ಉದ್ವಿಗ್ನತೆ ಉಂಟಾಗಿತ್ತು. ಭಾನುವಾರ ಸಂಜೆಯಿಂದಲೇ ವಿವಿಧ ಬುಡಕಟ್ಟು ಸಂಘಟನೆಗಳು ಆಸ್ಪತ್ರೆ ಬಳಿ ಜಮಾಯಿಸಿ ಡಾ.ಪ್ರೀತಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದವು.

ಕಾಕತೀಯ ವೈದ್ಯಕೀಯ ಕಾಲೇಜಿನ(ಕೆಎಂಸಿ) ವಿದ್ಯಾರ್ಥಿನಿ ಪ್ರೀತಿ ತನ್ನ ಹಿರಿಯ, ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಎಂಡಿ ಸೈಫ್‌ನಿಂದ ಕಿರುಕುಳಕ್ಕೆ ಒಳಗಾದ ನಂತರ ಆತ್ಮಹತ್ಯೆ ನಿರ್ಧಾರ ಮಾಡಿದ್ದರು. ಶುಕ್ರವಾರ ಮತ್ತೇವಾಡ ಪೊಲೀಸರು ಸೈಫ್ ನನ್ನು ಬಂಧಿಸಿದ್ದು ಆತನ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಅನಸ್ತೇಶಿಯಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಪ್ರೀತಿಗೆ ಕಳೆದ ಮೂರು ತಿಂಗಳಿನಿಂದ ಸೈಫ್ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ. ವಾರಂಗಲ್ ಪೊಲೀಸ್ ಕಮಿಷನರ್ ಎ ವಿ ರಂಗನಾಥ್ ಪ್ರಕಾರ, ವಾರಂಗಲ್‌ನ 3ನೇ ಜುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಸೈಫ್‌ನನ್ನು ಖಮ್ಮಂ ಜೈಲಿಗೆ ಸ್ಥಳಾಂತರಿಸಲಾಗಿದೆ.

ಪ್ರೀತಿ ಅವರ ನಿಧನಕ್ಕೆ ಆರೋಗ್ಯ ಸಚಿವ ಟಿ ಹರೀಶ್ ರಾವ್ ಸಂತಾಪ ಸೂಚಿಸಿದ್ದು ರಾಜ್ಯ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ‘ಪ್ರೀತಿ ಆರೋಗ್ಯವಾಗಿ ಮರಳಬೇಕೆಂದು ನಾವು ಆಶಿಸಿದ್ದೆವು ಆದರೆ ಅವಳು ಹಿಂತಿರುಗದ ಲೋಕಕ್ಕೆ ತೆರಳಿದ್ದಾಳೆ. ರಾಜ್ಯ ಸರ್ಕಾರ ಅವರ ಕುಟುಂಬದ ಬೆಂಬಲಕ್ಕೆ ನಿಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

Latest Indian news

Popular Stories