ಇಡೀ ದೇಶಕ್ಕೆ ಒಂದು ‘ಸಾಂವಿಧಾನಿಕ ಧರ್ಮ’ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!

ನವದೆಹಲಿ: ದೇಶದಲ್ಲಿ ‘ಸಾಂವಿಧಾನಿಕ ಧರ್ಮ’ವನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದ್ದು ಜನರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸುವುದನ್ನು ತಡೆಯಬಹುದೇ ಎಂದು ಅರ್ಜಿದಾರರನ್ನೇ ಪ್ರಶ್ನಿಸಿದರು.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಅಂತಹ ಅರ್ಜಿಯನ್ನು ಸಲ್ಲಿಸಲು ನಿಮಗೆ ಎಲ್ಲಿಂದ ಆಲೋಚನೆ ಬಂತು ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಸಾಂವಿಧಾನಿಕ ಧರ್ಮ ಇರಬೇಕು ಎಂದು ನೀವು ಹೇಳುತ್ತೀರಿ. ಜನರು ತಮ್ಮ ಧರ್ಮಗಳನ್ನು ಆಚರಿಸುವುದನ್ನು ತಡೆಯಬಹುದೇ? ಇದು ಏನು? ಖುದ್ದು ಹಾಜರಾಗಿದ್ದ ಅರ್ಜಿದಾರನಿಗೆ ಪೀಠ ಹೇಳಿದೆ.

ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗುವ ಅರ್ಜಿದಾರರು ಅಥವಾ ವಕೀಲರು. ಅರ್ಜಿದಾರರಾಗಿ ಹಾಜರಾಗುವ ಮೊದಲು ತಾವು ನ್ಯಾಯಾಲಯದ ರಿಜಿಸ್ಟ್ರಾರ್‌ನಿಂದ ಅನುಮತಿ ಪಡೆದು ಮುಕೇಶ್ ಕುಮಾರ್ ಮತ್ತು ಮುಖೇಶ್ ಮನ್ವೀರ್ ಸಿಂಗ್ ಅವರು ತ್ವರಿತ ಅರ್ಜಿ ಸಲ್ಲಿಸಿದ್ದಾರೆ.

ತಾವು ಸಾಮಾಜಿಕ ಕಾರ್ಯಕರ್ತನೆಂದು ಹೇಳಿದ ಅರ್ಜಿದಾರರು, ‘ಒಂದು ಸಾಂವಿಧಾನಿಕ ಧರ್ಮ’ಕ್ಕಾಗಿ ಭಾರತದ ಜನರ ಪರವಾಗಿ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಪಿಐಎಲ್ ಸಲ್ಲಿಸಿರುವುದಾಗಿ ಪೀಠಕ್ಕೆ ತಿಳಿಸಿದರು. ಇದಕ್ಕೆ ಪೀಠ, ಯಾವ ಆಧಾರದ ಮೇಲೆ?” ಎಂದು ಪ್ರಶ್ನಿಸಿತ್ತು. ಅಲ್ಲದೆ 1950ರ ಸಾಂವಿಧಾನಿಕ ಆದೇಶವನ್ನು ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ ಎಂದು ಪೀಠ ಹೇಳಿದೆ. ಆದರೆ, ಅದು ಯಾವ ಸಾಂವಿಧಾನಿಕ ಆದೇಶವನ್ನು ಉಲ್ಲೇಖಿಸುತ್ತದೆ ಎಂದು ನಮೂದಿಸಿಲ್ಲ ಎಂದು ಹೇಳಿದ ಪೀಠ ಅರ್ಜಿಯನ್ನು ತಿರಸ್ಕರಿಸಿತು.

ಸಂವಿಧಾನದ 32ನೇ ವಿಧಿಯು ದೇಶದ ನಾಗರಿಕರಿಗೆ ತಮ್ಮ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಭಾವಿಸಿದರೆ ಅವರು ಸೂಕ್ತ ಪ್ರಕ್ರಿಯೆಗಳ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಹಕ್ಕನ್ನು ನೀಡುತ್ತದೆ.

Latest Indian news

Popular Stories