ಈ ಬಾರಿ RSS ಮೋದಿ ವಿರುದ್ಧ ಇದೆ- ಸಂಜಯ್ ರೌತ್; INDIA ಸೇರ್ತಾರ ಶಿಂಧೆ ಬಣದ 4 ಸಂಸದರು? | ಮೋದಿ ಸರಕಾರ ರಚನೆಯಾದ್ರು ಕೆಲವೇ ದಿನದಲ್ಲಿ ಬೀಳುತ್ತಾ?

ಮುಂಬೈ: ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ 3ನೇ ಅವಧಿಗೆ ಬರುವುದು ಆರ್ ಎಸ್ಎಸ್ ಗೇ ಹೆಚ್ಚಾಗಿ ಇಷ್ಟವಿರಲಿಲ್ಲ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರೌತ್ ಹೇಳಿದ್ದಾರೆ.

2024 ರ ಜನಾದೇಶ ಮೋದಿಗೆ ವಿರುದ್ಧವಾಗಿದೆ. ಈ ಫಲಿತಾಂಶವನ್ನು ಮೋದಿ ವಿನಮ್ರತೆಯಿಂದ ಒಪ್ಪಿಕೊಂಡು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯಬೇಕು, ಇವೆಲ್ಲವನ್ನೂ ಮೀರಿ ಮೋದಿ ಏನಾದರೂ ಸರ್ಕಾರ ರಚನೆ ಮಾಡಿದಲ್ಲಿ ಅದು ದೀರ್ಘಾವಧಿಯಲ್ಲಿ ಉಳಿಯುವುದಿಲ್ಲ ಎಂದು ರೌತ್ ಹೇಳಿದ್ದಾರೆ.

ಈ ಬಾರಿ ಆರ್ ಎಸ್ಎಸ್ ಮೋದಿ ಪ್ರಧಾನಿಯಾಗುವುದರ ವಿರುದ್ಧವಿದೆ, ಅದು ಪ್ರಧಾನಿ ಹುದ್ದೆಗೆ ಬೇರೆಯದ್ದೇ ಯೋಜನೆಗಳನ್ನು ಹೊಂದಿತ್ತು ಎಂದು ರೌತ್ ಹೇಳಿದ್ದಾರೆ.

ಚಂದ್ರಬಾಬು ನಾಯ್ಡು- ನಿತೀಶ್ ಕುಮಾರ್ ಗೆ ಶಾ-ಮೋದಿ ಜೋಡಿಯ ದ್ವೇಷ ರಾಜಕಾರಣದ ಬಗ್ಗೆ ಚೆನ್ನಾಗಿ ಅರಿವಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ರೌತ್ ಹೇಳಿದ್ದಾರೆ.

ಶಿಂಧೆ ಬಣದ ಸಂಸದರು ಎಂವಿಎ ಗೆ ಬರಲು ಸಿದ್ಧ?

ಮತ್ತೊಂದು ಆಸಕ್ತಿಕರ ಬೆಳವಣೆಗೆಯಲ್ಲಿ ಮೂಲಗಳ ಪ್ರಕಾರ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಿಎಂ ಏಕನಾಥ್ ಶಿಂಧೆ ಶಿವಸೇನೆಯ ಸಂಸದರೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದು, ಶಿಂಧೆ ಬಣದ ಸಂಸದರು ಎಂವಿಎ ಗೆ ವಾಪಸ್ಸಾಗಲು ಸಿದ್ಧರಿದ್ದು INDIAಯನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದೆ.

ಆರ್ ಎಸ್ಎಸ್ ಪ್ರಮುಖರು ಹೇಳುವುದೇನು ಅಂದರೆ…

ಸಂಜಯ್ ರೌತ್ ಹೇಳಿಕೆ ಬಗ್ಗೆ ಆರ್ ಎಸ್ಎಸ್ ನಾಯಕರನ್ನು ಸಂಪರ್ಕಿಸಿದಾಗ, ಸಂಘಟನೆಯ ಹಿರಿಯರೊಬ್ಬರು ಗೌಪ್ಯತೆಯ ಷರತ್ತು ವಿಧಿಸಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಹುದ್ದೆಗೆ ಆರ್ ಎಸ್ಎಸ್ ಈ ಬಾರಿ ಬೇರೆ ಹೆಸರನ್ನು ಹುಡುಕಲು ಗಂಭೀರವಾಗಿ ಪ್ರಯತ್ನಿಸಿತ್ತು ಎಂದು ಹೇಳಿದ್ದಾರೆ.

Latest Indian news

Popular Stories