ಬೆಳ್ತಂಗಡಿ | ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ; ಗುರುತು ಪತ್ತೆಯ ನಂತರ ಇಂದು ಮನೆಗೆ ತಲುಪಿದ ಮೃತದೇಹಗಳು!

ಬೆಳ್ತಂಗಡಿ: ತುಮಕೂರಿನಲ್ಲಿ ನಿಧಿ ಅಸೆಗೆ ಮಾ.22 ರಂದು ಬೆಳ್ತಂಗಡಿಯ ಮೂವರನ್ನು ಕೊಲೆ ಮಾಡಿ ಕಾರು ಸಹಿತ ಬೆಂಕಿ ಹಚ್ಚಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ದೇಹವು ಇಂದು ಮಾ.29 ರಂದು ಮುಂಜಾನೆ ಬೆಳ್ತಂಗಡಿ ಮನೆಗೆ ತಲುಪಿದೆ.

ದೇಹದ ಗುರುತು ಪತ್ತೆಯಾಗದ  ಹಿನ್ನೆಲೆಯಲ್ಲಿ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಇದೀಗ ಮೂವರ ಮೃತದೇಹವನ್ನು ಮನೆಮಂದಿಗೆ 7 ದಿನದ ಬಳಿಕ ಮಾ.29 ರಂದು ಶುಕ್ರವಾರ ಬೆಳಗ್ಗೆ ಉಜಿರೆಗೆ ತಲುಪಿದೆ.

ಶಾಹುಲ್ ಹಮೀದ್ ಹಾಗೂ ಇಸಾಕ್ ಅವರ ಮೃತದೇಹ  ಮೊಯ್ಯುದ್ದಿನ್ ಜುಮಾ ಮಸೀದಿ ಹಳೆಪೇಟೆಗೆ  ಹಾಗೂ ಸಿದ್ದೀಕ್ ಅವರ ಮೃತದೇಹ ಶಿರ್ಲಾಲ್ ಮಸೀದಿಗೆ  ತಲುಪಿದೆ. ಅಲ್ಲಿ ಅಂತಿಮ ದರ್ಶನ ಹಾಗೂ ವಿದಿವಿಧಾನ ನೆರವೇರಿಸಲಾಗಿದೆ.

Latest Indian news

Popular Stories