ಇಸ್ಲಾಮೊಫೋಬಿಯಾ ಮತ್ತು ಕುರಾನಿನ ಅವಮಾನದ ವಿರುದ್ಧ ಜಿ 20 ಶೃಂಗಸಭೆಯಲ್ಲಿ ಧ್ವನಿ ಎತ್ತಿದ್ದ ಟರ್ಕಿ ಅಧ್ಯಕ್ಷ ಎರ್ದೊಗನ್

ನವದೆಹಲಿ: ಇಸ್ಲಾಮೊಫೋಬಿಯಾ ಮತ್ತು ಕುರಾನಿನ ಅವಮಾನದ ವಿರುದ್ಧ ಜಿ 20 ಶೃಂಗಸಭೆಯಲ್ಲಿ ಟರ್ಕಿ ದೇಶದ ಅಧ್ಯಕ್ಷರಾದ ಎರ್ದೊಗನ್ ಧ್ವನಿ ಎತ್ತಿದ್ದಾರೆ.

ಇಸ್ಲಾಮೋಬಿಯಾದ ಸಮಸ್ಯೆಯ ನಿರಂತರವಾಗಿ ಕೇಳಿ ಬರುತ್ತಿದ್ದು ಈ ಕುರಿತು ವಿಚಾರ ವಿಮರ್ಶೆ ಮಾಡಬೇಕಾಗಿದೆ. ಇದರಿಂದ ದ್ವೇಷದ ಭಾವನೆ ಕೊನೆಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ಇರುವಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿರುವ ಚಿಂತೆಯ ವಿಚಾರವಾಗಿದೆ. ಕುರಾನಿನ ಅವಮಾನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ ಅದೊಂದು ಅಪರಾಧವಾಗಿದೆ. ಎಲ್ಲ ದೇಶಗಳು ಈ ಕುರಿತು ಸೂಕ್ತ ಕಾನೂನು ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಇವರ ಈ ಹೇಳಿಕೆಯ ವಿರುದ್ದ ಮತ್ತು ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

Latest Indian news

Popular Stories