ಉ.ಕ | ಅಂತ್ರವಳ್ಳಿ ಸಮೀಪ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಶವ ಪತ್ತೆ

ಕಾರವಾರ : ಕುಮಟಾ ತಾಲೂಕಿನ ಅಂತ್ರವಳ್ಳಿ ಸಮೀಪ ಅರಣ್ಯ ಪ್ರದೇಶದಲ್ಲಿ ಅಂದಾಜು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಮೃತ ಮಹಿಳೆಯ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವದ ಅಕ್ಕ-ಪಕ್ಕ ಯಾವುದೇ ಆದಾರ ದೊರೆತ್ತಿಲ್ಲ, ಮೃತ ಮಹಿಳೆ ಚೂಡಿದಾರ ಧರಿಸಿದ್ದಾಳೆ, ಸ್ಥಳಕ್ಕೆ ಕುಮಟಾ ಪೋಲಿಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಅಂತ್ರವಳ್ಳಿ ವಲಯದಲ್ಲಿ ಅಪರಿಚಿತ ಶವ ಸಿಕ್ಕ ಬಗ್ಗೆ ಕುಮಟಾ ಪೊಲೀಸ್ ‌ಠಾಣೆಯಲ್ಲಿ ದೂರು ಸಹ ದಾಖಲಾಗಿದೆ. ಮೃತ ಪಟ್ಟಿರುವ ಮಹಿಳೆ ಕುರಿತು ಯಾವುದೇ ಮಾಹಿತಿ ಲಭ್ಯವಾದಲ್ಲಿ ಕುಮಟಾ ಪೊಲೀಸ್ ಠಾಣೆಯ ದೂರವಾಣಿ 08386 222333 ಕರೆ ಮಾಡುವಂತೆ ಪಿಎಸ್ ಐ ಕೋರಿದ್ದಾರೆ.

Latest Indian news

Popular Stories