ಉಡುಪಿ ಕಾಂಗ್ರೆಸ್ ಭವನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀಗೆ ಇಂದು ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಲಾಯಿತು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಮನೆಯ ಬಾಗಲಿನಲ್ಲಿಯೇ ಮನೆಯೊಡತಿಗೆ 2000ರೂ. ಮೊತ್ತದ ಚೆಕ್ ನೀಡುವ ಕಟೌಟ್ ನಿರ್ಮಿಸಲಾಗಿತ್ತು. ಅದರ ಮುಂದೆ ಕಾಂಗ್ರೆಸ್ ಮುಖಂಡರು ದೀಪ ಬೆಳಗಿಸುವ ಮೂಲಕ ಯೋಜನೆಯನ್ನು ಉದ್ಘಾಟಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಡಿ.ಆರ್. ರಾಜು, ಪ್ರಸಾದ್‌ರಾಜ್ ಕಾಂಚನ್ ಗೃಹಲಕ್ಷೀ ಯೋಜನೆ ಬಗ್ಗೆ ಮಾತನಾಡಿ ದರು. ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೋಳ್ಕೆಬೈಲ್, ಮುಖಂಡರಾದ ಬಿ.ನರಸಿಂಹಮೂರ್ತಿ, ರಮೇಶ್ ಕಾಂಚನ್, ದಿನಕರ ಹೇರೂರು, ಜಯಕುಮಾರ್, ಪ್ರಖ್ಯಾತ್ ಶೆಟ್ಟಿ, ಸದಾಶಿವ ಕಟ್ಟಗುಡ್ಡೆ, ವೆರೋನಿಕಾ ಕರ್ನೆಲಿಯೋ, ಡಾ.ಸುನಿತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ರೋಶನಿ ಒಲಿವರಾ, ಫಾ.ಮಿಲಿಯಂ ಮಾರ್ಟೀಸ್, ಕೀರ್ತಿ ಶೆಟ್ಟಿ, ಸುಖೇಶ್ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.

ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿದರು. ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕಿಣಿ ವಂದಿಸಿದರು

Latest Indian news

Popular Stories