ವಿದ್ಯಾರ್ಥಿ ವೇತನ: ಬಯೋಮೆಟ್ರಕ್ ದಾಖಲೆ ನೀಡುವ ಕಾಲಾವಧಿ ಮುಂದೂಡಲು ವೆಲ್ ಪೇರ್ ಪಾರ್ಟಿ ಆಗ್ರಹ

ಬೆಂಗಳೂರು.: ಮೆಟ್ರಕ್ ಪೂರ್ವ ಮತ್ತು ಮೆಟ್ರಕ್ ನಂತರದ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಿದ ವಿಧ್ಯಾರ್ಥಿಗಳು ಆಗಸ್ಟ್ 31 ರೊಳಗೆ ತಮ್ಮ ಬೆರಳಚ್ಚು ದಾಖಲೆ ನೀಡಬೇಕೆಂದು ಕೇಂದ್ರ ಸರಕಾರ ಆದೇಶಿಸಿದೆ. ಈ ದಿನಾಂಕವನ್ನು ಮುಂದೂಡಬೇಕೆಂದು ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.


ಅವರು ಮಾತನಾಡುತ್ತಾ ” ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿಧ್ಯಾರ್ಥಿವೇತನವನ್ನು ಎಂಟನೆಯ ತರಗತಿಯ ತನಕ ರದ್ದುಗೊಳಿಸಿ ಮೋಸ ಮಾಡಿದ ಕೇಂದ್ರ ಸರಕಾರ ಸ್ಕಾಲರ್ ಶಿಪ್ ಹಂಚಿಕೆಯಲ್ಲಿ ಅವ್ಯವಹಾರದ ಸದ್ದು ಕೇಳಿದ ಹಿನ್ನೆಲೆಯಲ್ಲಿ ತನಿಖೆಯ ನೆಪದಲ್ಲಿ ಪ್ರೀ ಮೆಟ್ರಿಕ್ ಮತ್ತು ಮೆಟ್ರಿಕ್ ನಂತರದ ದೇಶದ ಸುಮಾರು ಇಪ್ಪತ್ತಾರು ಲಕ್ಷ ಅರ್ಜಿಗಳಿಗೆ ತಡೆ ಹಾಕಲಾಗಿದೆ. ಇದರ ತನಿಖೆಗೆ ಕೇವಲ ಒಂದು ತಿಂಗಳ ಗಡುವು ನೀಡಿ ಈ ನಡುವೆ ಬಯೋಮೆಟ್ರಿಕ್ ಲಿಂಕ್ ಒದಗಿಸಿದ ವಿಧ್ಯಾರ್ಥಿಗಳ ಅರ್ಜಿಗಳನ್ನು ಪುರಸ್ಕರಿಸಲಾಗುವುದು. ಈ ಗಾಗಲೇ ಕರ್ನಾಟಕದಲ್ಲಿ 3,67,044 ಅರ್ಜಿಗಳು ಬಂದಿದ್ದು ಕೇಂದ್ರ ಸರಕಾರದ ಆದೇಶದ ಅನುಸಾರ ತಡೆಹಿಡಿಯಲಾಗಿದೆ. ಆಗಸ್ಟ್ 31 ರೊಳಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಆಧಾರ್ ಬಯೋಮೆಟ್ರಿಕ್ ಮಾಹಿತಿ ಕಳುಹಿಸಬೇಕೆಂದು ಆದೇಶ ನೀಡಿದೆ. ನಮಗೆ ದೊರೆತ ಮಾಹಿತಿಯನುಸಾರ ಈ 3,67,044 ಅರ್ಜಿಗಳಲ್ಲಿ ಕೇವಲ ಒಂದು ಲಕ್ಷ ವಿಧ್ಯಾರ್ಥಿಗಳ ಬಯೋಮೆಟ್ರಿಕ್ ಮಾತ್ರ ಪೂರ್ತಿಯಾಗಿದೆ. ಜನರಲ್ಲಿ ಈಬಗ್ಗೆ ಬಹಳಷ್ಟು ಗೊಂದಲವಿದೆ. ಅಲ್ಲದೆ ಅದಕ್ಕೆ ಎಲ್ಲಾ ಕಡೆ ಸರಿಯಾದ ವ್ಯವಸ್ಥೆಯೂ ಇಲ್ಲ. ಹೀಗಿರುವಾಗ ಈ ತಿಂಗಳ ಅಂತ್ಯದೊಳಗೆ ಬಯೋಮೆಟ್ರಿಕ್ ದಾಖಲೆ ಒದಗಿಸಬೇಕೆಂದು ಆದೇಶಿಸಿರುವುದು ಅರ್ಜಿದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಬಯೋಮೆಟ್ರಿಕ್ ದಾಖಲೆಗೆ ನಿಗದಿಗೊಳಿಸಿದ ದಿನಾಂಕವನ್ನು ಮುಂದೂಡಬೇಕು. ಜೊತೆಗೆ ಆಧಾರ್ ಕಾರ್ಡ್ ಮಾಡಿಸದ‌ ಬಹಳಷ್ಟು ವಿಧ್ಯಾರ್ಥಿಗಳಿದ್ದಾರೆ. ಇನ್ನು ಮಾಡಿಸಿದರೂ ಅದು ಕೈಗೆ ಸಿಗಲು ಒಂದೆರಡು ತಿಂಗಳು ತಗಲುತ್ತದೆ. ಎರಡು ಲಕ್ಷ ವಿಧ್ಯಾರ್ಥಿಗಳ ಬಯೋ ಮೆಟ್ರಿಕ್ ಬೆರಳಚ್ಚು ದಾಖಲೆ ಪೂರ್ಣಗೊಂಡಿದೆ. ಇನ್ನು ಒಂದು ಲಕ್ಷ ವಿಧ್ಯಾರ್ಥಿಗಳದ್ದು ಬಾಕಿ ಉಳಿದಿವೆ. ನಿಗದಿಗೊಳಸಿದ ಗಡುವಿನಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಬಾರಿ ಈ ಬಯೋಮೆಟ್ರಕ್ ದಾಖಲೆ ಒದಗಿಸುವ ಆದೇಶವನ್ನು ರದ್ದುಗೊಳಿಸಿ ಮುಂದಿನ ವರ್ಷದಿಂದ ಜಾರಿಗೆ ತರಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕವು ಅಲ್ಪ ಸಂಖ್ಯಾತ ನಿರ್ದೇಶನಾಲಯವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಒತ್ತಾಯಿಸುತ್ತಿದೆ ಎಂದು ಹೇಳಿದರು.

Latest Indian news

Popular Stories