ಉ.ಕ ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು – ಲಿಂಕ್ ಒಂದು ಹಲವು ಸುದ್ದಿ

ಅರಣ್ಯ ಉತ್ಪನ್ನಗಳನ್ನು ಸಾಗಾಟ : ಸೂಕ್ತ ತನಿಖೆಗೆ ಆಗ್ರಹ : ಹೈಕೋರ್ಟ ವಕೀಲ ಹರಿಪ್ರಸಾದ್

ಕಾರವಾರ : ಅರಣ್ಯ ಉತ್ಪನ್ನಗಳನ್ನು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ನ್ಯಾಯವಾದಿ ಡಾ. ಹರಿಪ್ರಸಾದ ಒತ್ತಾಯ ಮಾಡಿದರು.

ಕಾರವಾರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಕಳೆದ 2023ರ ಜೂನ್ 10 ರಂದು ಶಿರಸಿ ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯಿಂದ ಎರಡು ಲಾರಿಗಳನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ ಲಾರಿಯಲ್ಲಿ ಅರಣ್ಯ ಉತ್ಪನ್ನಗಳ ಪ್ರಮಾಣದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಇದಕ್ಕಾಗಿ ಪ್ರಕರಣ ಸಹ ದಾಖಲಾಗಿದೆ. ತಪ್ಪಿತಸ್ಥ ಹಿರಿಯ ಅಧಿಕಾರಿಗಳನ್ನು ರಕ್ಷಣೆ ಮಾಡಲು ಮೇಲ್ನೋಟಕ್ಕೆ ಮಾತ್ರ ತನಿಖೆ ನಡೆಸಿದ್ದಾರೆ. ಆದರೆ ಯಾವುದೇ ತಪ್ಪಿಲ್ಲದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗಬೇಕು. ಇಲ್ಲದೆ ಇದ್ದರೇ ಲೋಕಾಯುಕ್ತರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಿಭಾಗದಿಂದ ಸೂಕ್ತ ದಾಖಲೆ, ವರದಿಗಳನ್ನು ಪಡೆದಿಲ್ಲ. ಪ್ರಾಥಮಿಕ ತನಿಖೆ ಮಾಡದೆ ಬನವಾಸಿ ವಲಯದ ಎಕ್ಕಂಬಿ ಅರಣ್ಯ ತನಿಖಾ ಠಾಣೆಯ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರ ವಿರುದ್ಧ ಮತ್ತು ಕರ್ನಾಟಕ ಅರಣ್ಯ ಸಂಹಿತೆ ಕಂಡಿಕೆ 121 ರಲ್ಲಿ ಸ್ಪಷ್ಟಪಡಿಸಿರುವಂತೆ ಡಿಪೋ ಅಧಿಕಾರಿಯಾದ ಸಹಾಯಕ ಸಂರಕ್ಷಣಾಧಿಕಾರಿ ಜಿ.ಟಿ.ಡಿ. ಮುಂಡಗೋಡ ಇವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೇ, ಜಿ.ಟಿ.ಡಿ. ಮುಂಡಗೋಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ ಎ. ವಡ್ಡರ, ಮಾರುತಿ ಜಿ. ಸೋರಗಾಂವಿ, ಮಹೇಶ ಎಮ್. ಬೋರಕರ, ಹನುಮಂತ ಬಿ. ಬಂಡಿವಡ್ಡರ, ಗುರುಚಂದ್ರ ಎಮ್, ಬ್ಯಾಳಿ ರವರನ್ನು ಅಮಾನತ್ತು ಮಾಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ವಿಭಾಗ ಮತ್ತು ಭಟ್ಕಳ ವಲಯಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊನ್ನಾವರ ವಿಭಾಗದವರಿಂದ ವರದಿಯನ್ನೇ ಪಡೆಯದೆ ಜಿ.ಟಿ.ಡಿ. ಮುಂಡಗೋಡದ ವಲಯ ಅರಣ್ಯಾಧಿಕಾರಿ ಜಿ.ಟಿ. ರೇವಣಕರರನ್ನು ಅಮಾನತ್ತು ಮಾಡಿದ್ದಾರೆ.

ಈ ಪ್ರಕರಣದಲ್ಲಿ ಇಲಾಖೆಯ ಅಧಿಕಾರಿಗಳು ಶಾಮೀಲಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಪ್ರಕರಣವನ್ನು ಬೈಪಾಸ್ ಮಾಡುವ ಮೂಲಕ ಕೆಳ ಸಿಬ್ಬಂದಿಯವರ ವಿರುದ್ಧ ಮಾತ್ರ ಕ್ರಮ ವಹಿಸಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಅಧಿಕಾರಿಗಳು ಶಾಮೀಲು ಆಗಿರುವುದನ್ನು ಪತ್ತೆ ಮಾಡಲು ಉನ್ನತ ಮಟ್ಟದ ತನಿಖೆ ತಂಡ ರಚನೆ ಮಾಡಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲು ಅರಣ್ಯ ಸಚಿವರು ಮುಂದಾಗಬೇಕು. ಪ್ರಕರಣದ ಸೂಕ್ತ ತನಿಖೆ ನಡೆಸಬೇಕು ಎಂದು ಹೈಕೋರ್ಟ ವಕೀಲ ಡಾ.ಹರಿಪ್ರಸಾದ್ ಒತ್ತಾಯ ಮಾಡಿದರು‌. ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಮಾಣಿಕ ತನಿಖೆಗೆ ಒತ್ತಾಯಿಸಿದ್ದು, ಈ ಬೇಡಿಕೆ ನಿರ್ಲಕ್ಷಿಸಿದರೆ, ಲೋಕಾಯುಕ್ತರ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಿರವತ್ತಿ ಚೆಕ ಪೋಸ್ಟನಲ್ಲಿ ಇಂದು 1.20 ಲಕ್ಷ ರೂ.ವಶಕ್ಕೆ

ಕಾರವಾರ : ಕಿರವತ್ತಿ ಚೆಕ ಪೋಸ್ಟನಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಯ ಸಮಯಕ್ಕೆ ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದ 1.20 ಲಕ್ಷ ರೂ.ವಶಕ್ಕೆ ತೆಗೆದುಕೊಳ್ಳಲಾಗಿದೆ.

ಲೊಕ್ಕಯ್ಯ ಶೆಟ್ಟಿ, ಎಂಬುವವರು ಎಂ.ಎಚ್- 14 ,ಜೆ ಆರ್ 9755 ವಾಹನದಲ್ಲಿ ಪುಣೆಯಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಕಿರವತ್ತಿ ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ಕರ್ತವ್ಯ ನಿರತ ಎಸ್.ಎಸ್.ಟಿ ತಂಡದವರು ಮತ್ತು ಪೊಲೀಸ್ ಸಿಬ್ಬಂದಿಗಳು ತಪಾಸಣೆ ಮಾಡಲಾಗಿ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಗಳನ್ನು ಯಾವುದೇ ದಾಖಲೆಗಳಿಲ್ಲದ ನಗದು ದೊರಕಿತು.

ಅಧಿಕೃತ ದಾಖಲೆಗಳು ಪರಿಶೀಲನಾ ಸ್ಥಳದಲ್ಲಿ ಲಭ್ಯವಿಲ್ಲದ ಕಾರಣ ನಿಯಮಾನುಸಾರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಮುಟ್ಟುಗೋಲು ಹಾಕಿಕೊಂಡ ರೂ 1,20,000-00 (ಒಂದು ಲಕ್ಷದ ಇಪ್ಪತ್ತು ಸಾವಿರ) ರೂಪಾಯಿ ಹಣವನ್ನು ಯಲ್ಲಾಪುರದ ಉಪ ಖಜಾನೆಯಲ್ಲಿ ಇರಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ್ ತಿಳಿಸಿದ್ದಾರೆ.

ಚುನಾವಣಾ ಬಹಿಷ್ಕಾರದ ಎಚ್ಚರಿಕೆ: 

ಕಾರವಾರ: ‌ಲೋಕಸಭೆ ಚುನಾವಣೆಯೊಳಗೆ ಹೊನ್ನಾವರ ತಾಲೂಕಿನ ಅನಂತವಾಡಿ ಬಳಿಯ ಕೊಂಕಣ ರೈಲ್ವೆಗೆ ಮೇಲ್ಸೇತುವೆ ಮಾಡಲು‌ ಕ್ರಮ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಕೋಟ, ತುಂಬೆಬೀಳು, ಅನಂತವಾಡಿ ರೈಲ್ಬೆ ಮೇಲ್ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ಗಜಾನನ ನಾಯ್ಕ ಹೇಳಿದರು.

ಕಾರವಾರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹೊನ್ನಾವರ ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯಿತಿಯಲ್ಲಿ ಕೊಂಕಣ ರೈಲ್ವೆ ಹಾದು ಹೋಗಿದೆ. ಆದರೆ ಅಲ್ಲಿನ ಕೋಟ, ತುಂಬೆಬೀಳು ಹಾಗು ಇತರ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿನ ರೈಲ್ವೇ ಗೇಟ್ ಯಾವಾಗಲೂ ಮುಚ್ಚಿರುತ್ತದೆ. ಇದರಿಂದ ಶಾಲೆಯ ಮಕ್ಕಳು ಹಾಗೂ ವೃದ್ದರಿಗೆ ತೊಂದರೆಯಾಗುತ್ತಿದೆ ಎಂದರು.

ಅಲ್ಲಿ ರೈಲ್ವೇ ಸೇತುವೆಯನ್ನು ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ಕೊಂಕಣ ರೈಲ್ವೇ ಮುಖ್ಯ ಕಚೇರಿಗೂ ಮನವಿ ನೀಡಿದ್ದೇವೆ. ಜತೆಗೆ ಪ್ರಧಾನ ಮಂತ್ರಿ ಕಚೇರಿಗೂ ಪತ್ರ ಬರೆಯಲಾಗಿದೆ. ಆದರೆ ಸೂಕ್ತ ಉತ್ತರ ಬರಲಿಲ್ಲ ಎಂದರು.
2019 ರಲ್ಲಿ ಕೊಂಕಣ ರೈಲ್ವೇ ಕಚೇರಿಯಿಂದ ಉತ್ತರ ಬಂದಿದ್ದು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರವು ಶೇ. 50 ರಷ್ಟು ಹಣ ನೀಡಬೇಕು ಎಂದು ತಿಳಿಸಿದ್ದು ಸರಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಹೀಗಾಗಿ ಲೋಕಸಭೆ ಚುನಾವಣೆ ಮಾತ್ರವಲ್ಲದೇ ಸೇತುವೆ ನಿರ್ಮಾಣವಾಗುವವರೆಗೆ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡಲಿದ್ದೇವ ಎಂದರು.

ಸಮಿತಿಯ ಉಪಾಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ, ಕಳೆದ‌ 30 ವರ್ಷ ದಿಂದ ತೊಂದರೆ ಅನುಭವಿಸುತ್ತಿದ್ದೇವೆ. 10 ನಿಮಿಷ ಗೇಟ್ ಹಾಕಿದರೆ ನೂರಾರು ವಾಹನಗಳು ನಿಲ್ಲುತ್ತವೆ. ಹೀಗಿದ್ದರೂ ವಾಹನಗಳು ಬಂದಾಗ ಅಕ್ಕಪಕ್ಕದ ನಿಲ್ದಾಣಗಳಿಗೆ ಸಂಪರ್ಕಿಸಿ ಬಳಿಕ 45 ನಿಮಿಷದ ಬಳಿಕ ಗೇಟ್ ತೆಗೆಯಲಾಗುತ್ತದೆ. ಇದರಿಂದಲೇ ತುರ್ತು ಪರಿಸ್ಥಿತಿಯಲ್ಲಿದ್ದ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಗ್ರಾಮಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮತಗಳಿದ್ದು ಚುನಾವಣಾ ಬಹಿಷ್ಕಾರ ಮಾಡಲಿದ್ದೇವೆ. ಇದಕ್ಕೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ರೈಲ್ವೆ ಹಳಿಯ ಮೇಲೆ ಕೂತು ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಈ ಸಮಸ್ಯೆಯಿಂದ ಊರಿಗೆ ಸಾರಿಗೆ ಬಸ್ ಕೂಡ ಬರುವುದಿಲ್ಲ‌. ಬಸ್ಸಿಗಾಗಿ ನಾಲ್ಕು ಕಿಲೋಮೀಟರ್ ನಡೆಯಬೇಕಾಗುತ್ತದೆ. ಶಾಲೆಯ ಮಕ್ಕಳು ಕೂಡ ಇದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಶಾಲೆಯ ಮಕ್ಕಳು ಹಾಗು ಅನಾರೋಗ್ಯ ಪೀಡಿತರು ಗ್ರಾಮ ಬಿಟ್ಟು ಹೋಗಲು ಕೂಡ ತೊಂದರೆಯಾಗುತ್ತದೆ ಎಂದು ಗ್ರಾಮದ ನಾಗಮ್ಮ ನಾಯ್ಕ ಬೇಸರ ವ್ಯಕ್ತಪಡಿಸಿದರು.
ಶಶಿಕಲಾ‌ ನಾಯ್ಕ, ಪರಮೇಶ್ವರ, ಈಶ್ವರ ನಾಯ್ಕ, ದಾಮೋದರ, ಮಾದೇವ ನಾಯ್ಕ. ಜಯಂತ ನಾಯ್ಕ. ಪ್ರಶಾಂತ ನಾಯ್ಕ , ಪಾಂಡುರಂಗ ಗೌಡ, ಈಶ್ವರ ,ಲಂಬೋಧರ ಹಾಗೂ ಇತರರು ಇದ್ದರು.
…….

Latest Indian news

Popular Stories