
Featured StoryDakshina Kannada
ಉಳ್ಳಾಲ: ಎಂಟನೇ ತರಗತಿ ವಿದ್ಯಾರ್ಥಿ ನಾಪತ್ತೆ
ಉಳ್ಳಾಲ: ಮಸೀದಿಯಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಅಲ್ಲಿಂದಲೇ ಶಾಲೆಗೆ ತೆರುತ್ತಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ.
ಸುಳ್ಯ ತಾಲೂಕಿನ ಪೆರುವಾಜೆಯ ಹನೀಫ್ ಇಂದ್ರಾಜೆಯ ಪುತ್ರ ಅಬೂಬಕ್ಕರ್ ಅಬೀಲ್ ನಾಪತ್ತೆಯಾದ ಬಾಲಕ. ಈತ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದು, ಅಲ್ಲಿಂದಲೇ ಶಾಲೆಗೂ ತೆರಳುತ್ತಿದ್ದ ಎಂದು ತಿಳಿದು ಬಂದಿದೆ. ಎಂಟನೇ ತರಗತಿಯ ವಿದ್ಯಾರ್ಥಿಯಾಗಿರುವ ಅಬೀಲ್ ನವೆಂಬರ್ 16ರಂದು ಸಂಜೆ ಮಸೀದಿಯಿಂದ ಅಂಗಡಿಗೆ ಹೋದವನು ಮರಳಿ ಬಂದಿರಲಿಲ್ಲ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ.




