Featured StoryUdupi

ಉಡುಪಿ | 9 ಕೋಟಿಯಿಂದ ಆರಂಭಗೊಂಡ ವಾರಾಹಿ ಯೋಜನೆ ಇದೀಗ 1300 ಕೋಟಿ ದಾಟಿದೆ: 44 ವರ್ಷ ಆದರೂ ಯೋಜನೆಗೆ ಸಿಕ್ಕಿಲ್ಲ ಮುಕ್ತಿ!

ಹೌದು! ಉಡುಪಿ ಜಿಲ್ಲೆಯ ಮಹತ್ವಾಕಾಂಕ್ಷೆಯ ಯೋಜನೆ “ವಾರಾಹಿ” ಯೋಜನೆ 9 ಕೋಟಿಗೆ ಅನುಮೋದನೆಗೊಂಡು ಆರಂಭವಾಗಿತ್ತು. ಇದೀಗ ಅದು 1300 ಕೋಟಿ ದಾಟಿದೆ. ಆದರೆ ಕಾಮಗಾರಿ ಇನ್ನೂ ಪೂರ್ತಿಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳುವಾಗ 1700 ಕೋಟಿ ಹಣ ವೆಚ್ಚ ಖರ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಯೋಜನೆ ಆರಂಭವಾಗಿ 44 ವರ್ಷಗಳು ಸಂದಿವೆ. ಆದರೆ ಇನ್ನೂ ಕೂಡ ಕಾಮಗಾರಿ ಮುಕ್ತಾಯಗೊಂಡಿಲ್ಲ. ಆಮೆಗಾತಿಯಲ್ಲಿ ಕಾಮಗಾರಿ ಸಾಗುತ್ತಿದ್ದು ಜನ ಉಪಯೋಗಕ್ಕೆ ಬಾರದ ಯೋಜನೆಯಾಗಿಯೇ ಉಳಿದಿದೆ.

ಮಾಹಿತಿಯ ಪ್ರಕಾರ 4 ದಶಕಗಳ ಹಿಂದೆ ಕೇವಲ 9.43 ಕೋ.ರೂ. ಆಡಳಿತಾತ್ಮಕ ಅನುಮೋದನೆ ಯಿಂದ ಆರಂಭಗೊಂಡ ವಾರಾಹಿ ನೀರಾವರಿ ಯೋಜನೆಗೆಯ ಗಾತ್ರ ಪ್ರಸ್ತುತ 1,302.09 ಕೋಟಿ ರೂ.ಗೆ ತಲುಪಿದೆ. ಆದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.

ಉಡುಪಿ ಮತ್ತು ಕುಂದಾಪುರ ತಾಲೂಕಿನ 15,702 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು 1979ರಲ್ಲಿ ಆಗಿನ ರಾಜ್ಯ ಸರಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಅನಂತರ ಯೋಜನೆಯ ಗಾತ್ರ ವರ್ಷದಿಂದ ವರ್ಷಕ್ಕೆ ಹಿಗ್ಗುತ್ತಾ ಸಾಗಿತೇ ವಿನಾ ಕಾಮಗಾರಿ ವೇಗ ಪಡೆಯಲೇ ಇಲ್ಲ. ಇದರಿಂದ ಈ ಭಾಗದ ರೈತರು ವಾರಾಹಿ ಬರುತ್ತಾಳೆಂದು ಕಾಯುತ್ತ ಕುಳಿತಿದ್ದಾರೆ, ಅವರ ಕಾಯುವಿಕೆ ಇನ್ನೂ ಮುಗಿದಿಲ್ಲ.

ವಾರಾಹಿ ಬಲದಂಡೆ ಸಾಮಾನ್ಯ ಕಾಲುವೆ ಸರಪಳಿಯಲ್ಲಿ 18.72 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಎಡ ದಂಡೆ ಕಾಲುವೆ ಸರಪಳಿ ಯಲ್ಲಿ 38 ಕಿ.ಮೀ. ಪೂರ್ಣಗೊಂಡಿದೆ. ಇದ ರಿಂದ ಸುಮಾರು 6,110 ಹೆಕ್ಟೇರ್‌ ಪ್ರದೇಶ ಅಚ್ಚುಕಟ್ಟು ಸೃಜಿಸಲಾಗಿದೆ. ಆಗಬೇಕಾದ ಕಾಮಗಾರಿಗಳು ಸಾಕಷ್ಟಿವೆ.


ರಾಜ್ಯ ಸರಕಾರ ಯೋಜನೆಯನ್ನು ಕಾಲಮಿತಿ ಯೊಳಗೆ ಪೂರ್ಣಗೊಳಿಸಲು ಮತ್ತೂಂದು ಗಡುವು ವಿಧಿಸಿದೆ. ಯೋಜನೆಯಡಿ ಕಾಲುವೆ ನಿರ್ಮಾಣ, ಅರಣ್ಯ ಹಾಗೂ ಅರಣ್ಯೇತರ ಭೂ ಪ್ರದೇಶಗಳ ಸ್ವಾಧೀನ ಪಡೆಯಲು / ಹಸ್ತಾಂತರಿಸಲು (ಅದಕ್ಕೆ ಪರಿಹಾರ ನೀಡುವುದು ಸೇರಿ) ಪ್ರಯತ್ನ ನಡೆದಿದೆ. ಕಾಮಗಾರಿಗಳನ್ನು 2024 25ನೇ ಸಾಲಿನಲ್ಲಿ ಪೂರ್ಣಗೊಳಿಸಲು ಸೂಚಿಸ ಲಾಗಿದೆ. ಸರಕಾರದ ಅನುದಾನದ ಲಭ್ಯತೆಯ ಆಧಾರದಲ್ಲಿ ಮುಂದಿನ ಕ್ರಮ ಎನ್ನುತ್ತಾರೆ ಅಧಿಕಾರಿಯೊಬ್ಬರು.

ವಾರಾಹಿ ಅಚ್ಚುಕಟ್ಟಿನ ಪ್ರದೇಶಕ್ಕೆ ನೀರುಣಿಸಲು ಯೋಜನೆಯನ್ನು ಆರಂಭಿಸಲಾಗಿತ್ತು. ಅನಂತರ ಯೋಜನೆಯನ್ನು ತಾಲೂಕಿನಿಂದ ಹೊರಗೂ ವಿಸ್ತರಿಸಲಾಯಿತು. ಪ್ರಸ್ತುತ ವಾರಾಹಿಯಿಂದಲೇ ಉಡುಪಿ ನಗರಕ್ಕೂ ಕುಡಿಯುವ ನೀರು ಪೂರೈಸುವ ಯೋಜನೆ ಚಾಲ್ತಿಯಲ್ಲಿದೆ. ಬೈಂದೂರು ಮತ್ತು ಕಾರ್ಕಳ ತಾಲೂಕಿಗೂ ಪ್ರತ್ಯೇಕ ಯೋಜನೆಯಡಿ ವಿಸ್ತರಿಸಲಾಗಿದೆ ಮತ್ತು ಕಾಮಗಾರಿಯೂ ನಡೆಯುತ್ತಿದೆ. ಹೀಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ವಾರಾಹಿ ಬರಲಿದೆಯಂತೆ.

9.43 ಕೋ.ರೂ.ಗಳಿಂದ ಯೋಜನೆ ಆರಂಭವಾಗಿ 2003 2004ರಲ್ಲಿ 569.53 ಕೋ.ರೂ.ಗಳಿಗೆ ಯೋಜನೆ ಪರಿಷ್ಕೃತಗೊಂಡಿತು. 2006ರಲ್ಲಿ ಸರಕಾರ ಈ ಪರಿಷ್ಕೃತ ಯೋಜನೆಗೆ ಆನುಮೋದನೆ ನೀಡಿತು. ವಿಶೇಷವೆಂದರೆ ಈವರೆಗೆ 1,302 ಕೋ.ರೂ. ವೆಚ್ಚ ಮಾಡಲಾಗಿದೆ.

ಹೊಸ ಡಿಪಿಆರ್‌
ವಾರಾಹಿ ಯೋಜನೆಯನ್ನು ಇನ್ನಷ್ಟು ವಿಸ್ತರಿ ಸುವ ಹಿನ್ನೆಲೆಯಲ್ಲಿ 2014 15ರಲ್ಲಿ 1,789.50 ಕೋ.ರೂ.ಗಳಿಗೆ ಪರಿಷ್ಕೃತ ವಿಸ್ತೃತ ಯೋಜನ ವರದಿ (ಡಿಪಿಆರ್‌) ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರಕಾರ ಇನ್ನೂ ಅನುಮತಿ ನೀಡಿಲ್ಲ. ಪರಿಷ್ಕೃತ ಡಿಪಿಆರ್‌ಗೆ ಒಪ್ಪಿಗೆ ನೀಡಿದಲ್ಲಿ ಯೋಜನೆಯ ಗಾತ್ರ ಇನ್ನಷ್ಟು ಹಿಗ್ಗಲಿದೆ ಎಂದು ಹೇಳಲಾಗುತ್ತಿದೆ.

ಮಾಹಿತಿ ಕೃಪೆ: ಉದಯವಾಣಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button