ವಾರಣಾಸಿಯಲ್ಲೇ ಕಳೆದ ಬಾರಿ ಇದ್ದ ಹವಾ ಇಲ್ಲ; ಕುಗ್ಗಿದ ಮೋದಿಯ ಗೆಲುವಿನ ಅಂತರ!

ಲೋಕಸಭಾ ಚುನಾವಣೆ ಈ ಬಾರಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ತಂದು ಕೊಟ್ಟಿಲ್ಲ. ಸ್ವತಃ ಮೋದಿ ಸ್ಪರ್ಧಿಸಿದ್ದ ವಾರಾಣಾಸಿಯಲ್ಲಿ ಅವರ ಗೆಲುವಿನ ಅಂತರ ಕುಗ್ಗಿದೆ.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 2024 ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿ ಲೋಕಸಭಾ ಸ್ಥಾನವನ್ನು 1,52,513 ಅಂತರದಿಂದ ಪಿಎಂ ಮೋದಿ ಗೆದ್ದಿದ್ದಾರೆ. 2019 ಮತ್ತು 2014ರ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ವಿಜಯದ ಅಂತರ ಗಣನೀಯವಾಗಿ ಕಡಿಮೆಯಾಗಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ 4,79,505 ಮತಗಳ (45.2%) ಅಂತರದಿಂದ ಗೆದ್ದಿದ್ದರು. 2014 ರ ಲೋಕಸಭಾ ಚುನಾವಣೆಯಲ್ಲಿ ಅವರು 3,71,784 ಮತಗಳ (36.14 %) ಅಂತರದಿಂದ ಗೆದ್ದಿದ್ದರು.

Latest Indian news

Popular Stories