Featured StoryVijayapura

ನಕಲಿ ಮತದಾರರ ಹೆಸರು ಸೇರ್ಪಡೆ: ನ್ಯಾಯಾಂಗ ತನಿಖೆಗೆ ಒತ್ತಾಯ

ವಿಜಯಪುರ : ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಹಾಗೂ ಖೋಟ್ಟಿ ಮತದಾರರ ಹೆಸರುಗಳು ಸೇರ್ಪಡೆಯಾಗಿರುವ ಬಗ್ಗೆ ಕೂಡಲೇ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.

ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಸಂಬದ್ಧವಾಗಿ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ, ಅದರ ಫಲವಾಗಿ ಕಾಂಗ್ರೆಸ್ ಸೋಲು ಅನುಭವಿಸುವಂತಾಗಿದೆ, ಸಾವಿರಾರು ಸಂಖ್ಯೆಯಲ್ಲಿ ಭೋಗಸ್ ಹೆಸರುಗಳು ಸೇರ್ಪಡೆಯಾಗಿವೆ ಎಂದು ದೂರಿದರು.
ಖೊಟ್ಟಿ ಮತದಾರರ ಹೆಸರು ಸೇರ್ಪಡೆ ಹಾಗೂ ಖೊಟ್ಟಿ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಲಾಗಿದೆ, ಈ ರೀತಿಯಾಗಿ ಅಸಂಬದ್ಧ, ಕಾನೂನು ಬಾಹಿರವಾಗಿ ವಿಜಯಪುರ ನಗರ ಶಾಸಕರು ಆಯ್ಕೆಯಾಗಿದ್ದಾರೆ, ಈ ರೀತಿಯ ವಿದ್ಯಮಾನಗಳು ಸೃಜಿಸಲು ಸಹಕರಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ, ಅಲ್ತಾಫ್ ಇಟಗಿ, ಆಸಿಫ್ ಶಾನವಾಲೆ, ಅಪ್ಪು ಪೂಜಾರಿ, ದಿನೇಶ್ ಹಳ್ಳಿ, ಜಮೀರ ಬಾಂಗಿ, ಮೈನುದ್ದೀನ ಬೀಳಗಿ, ವೈಜನಾಥ ಕರ್ಪೂರಮಠ, ಗಿರೀಶ್ ಇಟ್ಟಂಗಿ, ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ಅಪ್ಜಲ್ ಜಾನವೆಕರ, ಸದ್ದಾಂ ಇನಾಮದಾರ, ಭಾರತಿ ಹೊಸಮನಿ, ರಾಜೇಶ್ವರಿ ಚೋಳಕೆ, ಆಸ್ಮಾ ಕಾಲೆಬಾಗ, ರೂಬಿನಾ ಹಳ್ಳೂರ, ಶಮಿಮ ಅಕ್ಕಲಕೋಟ, ಧನರಾಜ ಎ., ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ ಉಪಸ್ಥಿತರಿದ್ದರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button