Featured StoryMadikeri

ಸಾವಿನಲ್ಲೂ ಒಂದಾದ ದಂಪತಿ | ವಿಕಾಸ್ ಟ್ರಸ್ಟ್ ನ ರಮೇಶ್ ಪತ್ನಿ ರೂಪ ಇನ್ನಿಲ್ಲ

ಅನಾಥರ ಮತ್ತು ನಿರ್ಗತಿಕರ ಪಾಲಿನ ಆಶಾಕಿರಣರಾಗಿದ್ದ ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ರಮೇಶ್ ಮತ್ತು ರೂಪ ದಂಪತಿಯ ಮೇಲೆ ವಿಧಿ ಅದೇಕೆ ಮುನಿಸಿಕೊಂಡಿತೋ??? ಕಿಂಚಿತ್ ಕನಿಕರವಿಲ್ಲದ ಜವರಾಯ ಸಿಲಿಂಡರ್ ರೂಪದಲ್ಲಿ ಸ್ಫೋಟಗೊಂಡು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದ ರಮೇಶ್ ಅವರು ನಿಧನರಾಗಿ ಎರಡು ದಿನ ಕಳೆಯುವ ಮುನ್ನವೇ ಅವರ ಪತ್ನಿ ರೂಪ ಕೂಡ ಇಹಲೋಕ ತ್ಯಜಿಸಿದ್ದಾರೆ. ಕಳೆದ ಗುರುವಾರ ರಾತ್ರಿ ಮಡಿಕೇರಿ ನಿವಾಸದಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ರಮೇಶ್ ಹಾಗೂ ಅವರ ಪತ್ನಿ ರೂಪ ಮತ್ತು ತಂದೆ ಗಂಭೀರವಾಗಿ ಗಾಯಗೊಂಡು ಚಿಂತಾಜನಕಾರಾಗಿದ್ದರು. ಗಾಯಳುಗಳನ್ನು ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇವರ ಪೈಕಿ ರಮೇಶ್ ಅವರು ಭಾನುವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಇತ್ತ ಇವರ ಅಂತ್ಯಕ್ರಿಯೆ ಸೋಮವಾರ ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿದ್ದರೆ . ಅತ್ತ ಆಸ್ಪತ್ರೆಯಲ್ಲಿ ವಿಧಿಯ ಅಟ್ಟಹಾಸಕ್ಕೆ ಚಿಕಿತ್ಸೆ ಫಲಕಾರಿಯಾಗದೇ ರೂಪ ನಡುರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಇಂದು ಮಡಿಕೇರಿಯ ಹಿಂದೂ ರುದ್ರಭೂಮಿಯಲ್ಲಿ ನಡೆಯುವ ಸಾಧ್ಯತೆ ಇದೆ. ರಮೇಶ್ ಹಾಗೂ ರೂಪ ದಂಪತಿ ಮೂವರು ಪುತ್ರಿಯರನ್ನು ಅಗಲಿದ್ದಾರೆ.
.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button