ಕುಂದಾಪುರ: ನಿದ್ದೆಗಣ್ಣಿನಲ್ಲಿ ಮಧ್ಯೆ ರಾತ್ರಿ ನಡೆದುಕೊಂಡು ಬಂದ ಮಗುವನ್ನು ರಕ್ಷಿಸಿದ ಯುವಕ – ಶ್ಲಾಘನೆ

ಉಡುಪಿ : ಕುಂದಾಪುರದ ಕೆದೂರಿನ ದಬ್ಬೆಕಟ್ಟೆ (Keduru near Kundapura) ಎಂಬಲ್ಲಿ ಇಲ್ಲಿನ ಮನೆಯೊಂದರ ಐದು ವರ್ಷದ ಪುಟ್ಟ ಹೆಣ್ಣುಮಗು ರಾತ್ರಿ ಮೂರು ಗಂಟೆಯ ಹೊತ್ತಿಗೆ ಮನೆಯಿಂದ ಹೊರಬಿದ್ದಿತ್ತು. ರಾತ್ರಿ ನಿದ್ದೆಗಣ್ಣಿನಲ್ಲಿ ನಡೆಯುತ್ತಿದ್ದ ಈ ಮಗು ಮನೆಯಿಂದ ಅಪ್ಪ ಅಮ್ಮನಿಗೆ ಗೊತ್ತಾಗದಂತೆ, ಯಾರಿಗೂ ಸಣ್ಣ ಸದ್ದೂ ಆಗದಂತೆ ಎದ್ದು ನಡೆಯುತ್ತಾ ಹೊರಟಿದೆ.

ಮಗುವನ್ನು ರಕ್ಷಿಸಿದ ಯುವಕ ವಿಶು (ಚಿತ್ರ)

ಮನೆಯ ಅಂಗಳ ದಾಟಿದ ಮಗು ಅಲ್ಲೇ ಒಳರಸ್ತೆಯಲ್ಲಿ ನಡೆದುಕೊಂಡು ಹೋಗಿ ವಾಹನಗಳು ಸಂಚರಿಸುವ ರಸ್ತೆಯ ಬದಿಗೆ ಬಂದಿದೆ. ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ಕೊರಗಜ್ಜನ ಗುಡಿ ಇದೆ. ಆ ಗುಡಿಗೆ ಹೋಗುವ ದಾರಿ ತೋರಿಸುವ ನಾಮ ಫಲಕದ ಪಕ್ಕದಲ್ಲಿ ಬಂದು ಈ ಮಗು ನಿಂತಿತ್ತು.

ಈ ಹೊತ್ತಿನಲ್ಲಿ ಕೊರಗಜ್ಜ ದೇವಸ್ಥಾನದ ನಾಮಫಲಕದ ಪಕ್ಕದಲ್ಲಿ ಒಂದು ಮಗು ನಿಂತಿದೆಯಲ್ಲಾ ಎಂದು ಆ ರಸ್ತೆಯಲ್ಲಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವಿಶ್ವ ಎಂಬುವವರು ಗಮನಿಸಿದ್ದಾರೆ.

ವಿಶ್ವ ಅವರು ಮೂರು ಗಂಟೆಯ ಹೊತ್ತಿಗೆ ತಮ್ಮ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಅವರಿಗೆ ವೇಗವಾಗಿ ಸಾಗುವಾಗಲೂ ಮಾರ್ಗದ ಬದಿಯಲ್ಲಿ ನಾಮಫಲಕದ ಪಕ್ಕದಲ್ಲಿ ಒಂದು ಮಗು ನಿಂತಿರುವಂತೆ ಕಂಡಿತು. ಅವರು ಕಾರಿನ ವೇಗವನ್ನು ಸ್ವಲ್ಪ ತಗ್ಗಿಸಿ ಸ್ವಲ್ಪ ಮುಂದೆ ಹೋಗಿ ನಿಂತರು. ಒಂದು ಪುಟ್ಟ ಮಗು ಕಂಡಿತು. ಮಗುವಿಗೆ ಬಟ್ಟೆ ಕೂಡಾ ಹಾಕಿರಲಿಲ್ಲ. ಬದಲಿಗೆ ಎರಡೂ ಕೈಗಳನ್ನು ಮೇಲೆತ್ತಿ ಜೋರಾಗಿ ಅಳುತ್ತಿತ್ತು. ಹಾಗಂತ ಒಮ್ಮೆಗೇ ಕಾರಿನಿಂದ ಇಳಿದು ಬಂದು ನೋಡುವಷ್ಟು ಧೈರ್ಯ ವಿಶ್ವ ಅವರಿಗೂ ಬರಲಿಲ್ಲ. ಯಾಕೆಂದರೆ ಈ ಭಾಗದಲ್ಲಿ  ಈ ರೀತಿಯ ದಾರಿಯ ಬಳಿಯಲ್ಲಿ ಮಗುವನ್ನು ಬಿಟ್ಟು ಅದನ್ನು ವಿಚಾರಿಸಲು ಹೋದಾಗ ಹೊಡೆದು ಕೊಲ್ಲುವ, ದರೋಡೆ ಮಾಡುವ, ಕಾರು ಅಪಹರಿಸುವ ಘಟನೆಗಳೂ ನಡೆಯಬಹುದು ಎಂಬ ಆತಂಕ ಸಹಜವಾಗಿಯೇ ಇರುತ್ತದೆ. ಸಾಲದ್ದಕ್ಕೆ ದಬ್ಬೆಕಟ್ಟೆ ಎನ್ನುವುದು ಮನೆಗಳಿದ್ದರೂ ಒಂದು ರೀತಿಯ ನಿರ್ಜನ ಪ್ರದೇಶ.

ಹಾಗೆ ಕಾರಿನಿಂದ ಇಳಿದು ನಾಮಫಲಕದ ಬಳಿಗೆ ಹೋದರು. ಆಗ ಮಗು ಇನ್ನಷ್ಟು ಜೋರಾಗಿ ಅಳಲು ಶುರು ಮಾಡಿತು. ವಿಶ್ವ ಅವರು ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡಿ ಕೇಳಿದಾಗ ತನಗೇ ಗೊತ್ತಿಲ್ಲದಂತೆ ನಡೆದುಕೊಂಡು ಬಂದಿದ್ದಾಗಿ ಹೇಳಿತು.

ಆಗ ವಿಶ್ವ ಅವರು ಅಲ್ಲೇ ಇದ್ದ ಮನೆಯ ಕಡೆಗೆ ಹೋಗಿ ಅಲ್ಲಿದ್ದವರನ್ನು ಎಬ್ಬಿಸಿ ವಿಷಯ ತಿಳಿಸಿದರು. ಆಗ ಅವರು ಬಂದು ಮಗು ಯಾರದ್ದು ಎಂದು ಗುರುತಿಸಿದರು. ಆ ಜಾಗದಿಂದ ಮಗುವಿನ ಮನೆಗೆ ಮೂರು ಕಿ.ಮೀ. ದೂರವಿತ್ತು. ಕೊನೆಗೆ ಮಗುವಿನ ಮನೆಗೆ ಹೋಗಿ ವಿಷಯ ತಿಳಿಸಲಾಯಿತು. ಅವರು ಬಂದು ಕಣ್ಣೀರು ಹಾಕುತ್ತಲೇ ದೇವರಂತೆ ಬಂದು ಕಾಪಾಡಿದಿರಿ ಮಗುವನ್ನು ಎಂದು ಹೇಳಿದರು. ಆಗ ವಿಶ್ವ ಅವರು ನಾನು ಕೂಡಾ ನಿಲ್ಲಿಸುತ್ತಿರಲಿಲ್ಲ. ನಂಗೂ ಭಯವಾಗಿತ್ತು. ಹೇಗೂ ಮಗು ರಕ್ಷಿಸಲ್ಪಟ್ಟು ಹೆತ್ತವರ ಮಡಿಲು ಸೇರಿದೆ.

Latest Indian news

Popular Stories