ವಯನಾಡು‌ ದುರಂತ: ಮೃತರ ಸಂಖ್ಯೆ 330ಕ್ಕೆ ಏರಿಕೆ ಇನ್ನೂ 280 ಮಂದಿ ನಾಪತ್ತೆ!

ವಯನಾಡ್: ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ 5 ನೇ ದಿನ ಮುಂದುವರೆದಿದೆ.

ಕುಸಿತ ಸಂಭವಿಸಿದ ಮುಂಡಕೈ ಪ್ರದೇಶದಲ್ಲಿ ಶುಕ್ರವಾರದವರೆಗೂ 18 ಮೃತದೇಹಗಳು ಪತ್ತೆಯಾಗಿದ್ದು, ಚಲಿಯಾರ್ ನದಿಯಿಂದ 5 ಮೃತದೇಹಗಳು ಹಾಗೂ 10 ದೇಹದ ಭಾಗಗಳಲ್ಲಿ ಹೊರತೆಗೆಯಲಾಗಿದೆ. ಇದರಿಂದಾಗಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 330 ಕ್ಕೆ ಏರಿಕೆಯಾಗಿದೆ.

ಸೇನೆ ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ನಾಪತ್ತೆಯಾಗಿರುವ ಇನ್ನೂ 280 ಮಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಭಾರತೀಯ ಸೇನೆ, ನೌಕಾದಳ, ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಹಲವು ವಿಭಾಗಗಳು ಸೇರಿದಂತೆ ಒಟ್ಟು 640 ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಸೇನಾ ಹೆಲಿಕಾಪ್ಟರ್ ಗಳ ಹೊರತಾಗಿ ಪೊಲೀಸ್ ಇಲಾಖೆಯಿಂದ ನಿಯೋಜಿಸಲ್ಪಟ್ಟ ಹೆಲಿಕಾಪ್ಟರ್ ಗಳೂ ಸಹ ಚಲಿಯಾರ್ ನದಿ ದಡದಲ್ಲಿ ದುರಂತ ಉಂಟಾದ ಸ್ಥಳಗಳಲ್ಲಿ ತಪಾಸಣೆ ನಡೆಸಿವೆ.

84 ಮಂದಿಗೆ ವಯನಾಡ್, ಕೋಯಿಕ್ಕೋಡ್, ಮಳಪ್ಪುರಂ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, 187 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ.

Latest Indian news

Popular Stories