ಬಿಜೆಪಿಯವರು ಮಣಿಪುರ ಘಟನೆ ಬಗ್ಗೆ ಏಕೆ ಮಾತನಾಡುತ್ತಿಲ್ಲ: ಸಚಿವ ಸಂತೋಷ ಲಾಡ್ ಕಿಡಿ

WhatsApp Image 2023 10 03 at 12.18.24 PM Featured Story, Politics, State News, Vijayapura
ವಿಜಯಪುರ: 10 ವರ್ಷದಿಂದ ಕೇಂದ್ರದಲ್ಲಿ ಆಡಳಿತದಲ್ಲಿರೋ ಬಿಜೆಪಿ ಮಣಿಪುರ ಘಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲಾ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಹೋರಾಟದಲ್ಲಿ ರೈತರು ಸಾವನ್ನಪ್ಪಿದ್ದರು, ಜನರ ಮೇಲೆ ಲಾಠಿ ಚಾರ್ಜ್ ಆಗಿದೆ ಅದರ ಕುರಿತು ಕೇಂದ್ರದವರು ಮಾತನಾಡಲ್ಲಾ ಆಗ ಕೋಮು ಸೌಹಾರ್ದತೆಗೆ ಧಕ್ಕೆ ಬರಲಿಲ್ವಾ? ಎಂದು ಪ್ರಶ್ನಿಸಿದರು.
ಏನೇ ಆದರೂ ಬರಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ, ಕಾಂಗ್ರೆಸ್ ಸರ್ಕಾರ ಮೇಲಿನ ಆರೋಪ ರಾಜಕೀಯ ಗಿಮಿಕ್ ಆಗಿದೆ ಎಂದರು.
ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಜೆಡಿಎಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇನ್ನು 6 ತಿಂಗಳು ಇದೆ ಗಿಮಿಕ್ ನಡೆಯುತ್ತದೆ ನೋಡುತ್ತಾರಯಿರಿ. ಎಲ್ಲೆ ಗಲಾಟೆ ಆದರೂ ಈ ದೇಶದಲ್ಲಿ ಕಾನೂನು ಇದೆ, ಹಿಂದೂಗಳಿಗೂ ಒಂದೆ ಕಾನೂನು, ಮುಸ್ಲಿಂಮರಿಗೂ ಒಂದೇ ಕಾನೂನು, ಗಲಭೆ ಆಗಿದ್ದರೆ ಸರ್ಕಾರ ಇದೆ, ಇಲಾಖೆ ಇದೆ ನೋಡುತ್ತದೆ. ಗಲಾಟೆಗಳನ್ನೆ ಇವರು ಕಾಯುತ್ತಿರುತ್ತಾರೆ, 24 ಗಂಟೆಗಳಲ್ಲಿ ಇವರು ಇದನ್ನೆ ಮಾತನಾಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
10 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಆಧಿಕಾರದಲ್ಲಿದ್ದಾರೆ, ಬರೀ ಹಿಂದೂ-ಮುಸ್ಲಿಂ ಎನ್ನುತ್ತಿದ್ದಾರೆ ಯಾವ ಹಿಂದೂ, ಯಾವ ಮುಸ್ಲಿಂ ಬಡ ರೇಖೆಯಿಂದ ಮೇಲೆ ಬಂದಿದ್ದಾರೆ ಹೇಳಿ ಎಂದು ಕುಟುಕಿದರು.
ಇನ್ನು ಪ್ರಧಾನಿ ಮನ್ ಕಿ ಬಾತ್ ಕುರಿತು ಕುಟುಕಿದ ಸಚಿವ ಲಾಡ್, ಜಿಡಿಪಿ ದರ ಎಲ್ಲಾ ಪ್ರಚಾರಕ್ಕೆ ಆಗಿದೆ, ಹಿಂದೆಯೂ ನಮ್ಮ ಜಿಡಿಪಿ ಚೆನ್ನಾಗಿತ್ತು, ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಹೋಗಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ, ಅಮೇರಿಕಾ ಚೀನಾದ ಜಿಡಿಪಿ ದರ ಎಷ್ಟಿದೆ, ಚೀನಾದಷ್ಟು ಜನಸಂಖ್ಯೆಯನ್ನು ಹೊಂದಿರೋ ನಾವು ಅವರಿಗಿಂತೆ ಎಷ್ಟು ಕೆಳಗಿದ್ದೇವೇ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಲೋಸಕಸಭಾ ಚುನಾವಣೆಯಲ್ಲಿ ಗಿಮಿಕ್ ಮಾಡುತ್ತಾರೆ, ಕಳೆದ ಬಾರಿ ಪುಲ್ವಾಮಾದಲ್ಲಿ ಸೈನಿಕರ ಮೇಲಿನ ದಾಳಿ ಪ್ರಚಾರವನ್ನಾಗಿ ಮಾಡಿಕೊಂಡರು, 350 ಕೆಜಿಗೂ ಆಧಿಕ ಆರ್ ಡಿ ಎಕ್ಸ್ ಎಲ್ಲಿಂದ ಬಂತು ಎಂದು ಕೇಂದ್ರದವರು ಮಾಹಿತಿ ನೀಡಿಲ್ಲ, ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದರು.
ಪುಲ್ವಾಮಾ ದಾಳಿಯನ್ನು ಪ್ರಚಾರಕ್ಕೆ ಮಾತ್ರ ಬಳಿಸಿಕೊಂಡರು, ಆರ್ ಡಿ ಎಕ್ಸ್ ಮೂಲವನ್ನು ಹೇಳಿಲ್ಲಾ, ಭಯೋತ್ಪಾದಕರು ಎಲ್ಲಿಂದ ಬರುತ್ತಾರೆ, ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಎಲ್ಲಾ ಮಾಧ್ಯಮಗಳಲ್ಲಿ ಮೋದಿ ಬಿಟ್ಟು ಯಾರೂ ಕಾಣಿಸಲ್ಲಾ, ಸಚಿವರು, ರಾಷ್ಟ್ರಪತಿಗಳು ಹಿರಿಯ ಆಧಿಕಾರಿಗಳು ಯಾರೂ ಬರಲ್ಲಾ ಕೇವಲ ಮೋದಿ ಮೋದಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣ ಆರೋಪಿತರ ಪ್ರಕರಣ ಕೈ ಬಿಡುವಂತೆ ಪೊಲೀಸ್ ಇಲಾಖೆಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿ ಕೆ ಶಿವಕುಮಾರ್ ಯಾವ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾರೆ ನನಗೆ ಗೊತ್ತಿಲ್ಲ. ರೈತರ ಗಲಾಟೆ ವೇಳೆ ಮಾಡಿದ ಕೇಸ್, ಹೋರಾಟದ ವೇಳೆ ಆದ ಕೇಸ್ಗಳನ್ನ ಕೈ ಬಿಡಿ ಅಂತಾ ಪತ್ರ ಬರೆಯೋದು ಕಾಮನ್ ಆದರೆ ಡಿಕೆಶಿಯವರು ಯಾವ ಹಿನ್ನೆಲೆಯಲ್ಲಿ ಪ್ರಕರಣ ಕೈ ಬಿಡಲು ಪತ್ರ ಬರೆದಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

Latest Indian news

Popular Stories