ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

ಗದಗ: ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದ ರಾಮಕರುಣಾನಂದ ಮಠದ ಬಳಿ ನಡೆದ ಹೆಜ್ಜೇನು ದಾಳಿಗೆ ನಾಗಪ್ಪ ಸೊರಟೂರ (40) ಎಂಬುವರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ಮಾರ್ಚ್‌ 26ರಂದು ಹೆಜ್ಜೇನು ದಾಳಿ ನಡೆದಿದೆ. ಆದರೆ, ನಾಗಪ್ಪ ಅವರನ್ನು ಮಾರ್ಚ್‌ 27ರಂದು ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾರೆ.

ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆಗೆ ಮೃತಪಟ್ಟಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀಕ್ಷಕಿ ಡಾ. ರೇಖಾ ಸೋನಾವಣೆ ತಿಳಿಸಿದ್ದಾರೆ.

ಹೆಜ್ಜೇನು ದಾಳಿಯಿಂದ ಗ್ರಾಮದ ಮೂರು ಮಂದಿ ಮಹಿಳೆಯರು, ನಾಲ್ಕು ಮಂದಿ ಪುರುಷರಿಗೆ ಗಾಯಗಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Latest Indian news

Popular Stories