Hassan

ಮಣಿಪುರದಲ್ಲಿ ಕರ್ತವ್ಯದ ವೇಳೆ ‘ಕರ್ನಾಟಕದ ಯೋಧ’ ನಿಧನ

ಹಾಸನ: ಜಿಲ್ಲೆಯ ಯೋಧ ಮಣಿಪುರದಲ್ಲಿ ಕರ್ತವ್ಯ ನಿರತರಾಗಿದ್ದ ಸಂದರ್ಭದಲ್ಲಿ, ಅನಾರೋಗ್ಯದಿಂದ ಹಠಾತ್ ನಿಧರಾಗಿರೋದಾಗಿ ತಿಳಿದು ಬಂದಿದೆ.

ಹಾಸನದ ಕೆ ಆರ್ ಪುರಂ ನಿವಾಸಿಯಾಗಿದ್ದಂತ ಪದ್ಮರಾಜು(52), ಸಿಆರ್ ಪಿಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ನಿನ್ನೆ ಮಣಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಸಂದರ್ಭದಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.
ಇಂದು ಮಧ್ಯಾಹ್ನ ಹಾಸನದ ಹೊರವಲಯದಲ್ಲಿರುವಂತ ಬಿಟ್ಟಗೋಡನಹಳ್ಳಿಯಲ್ಲಿ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ.

ಯೋಧ ಪದ್ಮರಾಜ್ ಅವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಹಾಸನದ ನಿವಾಸದಲ್ಲಿ ಪದ್ಮರಾಜ್ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button