ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ ಇಬ್ಬರ ವಿರುದ್ಧ ಪ್ರಕರಣ ದಾಖಲು

ಹಾಸನ: ಹಾಸನ ಲೋಕಸಭಾ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಾಯಿ ಹಾಗೂ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಅವರ ಕುಟುಂಬದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ತಮ್ಮನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ತನ್ನ ಜಮೀನು ಮಾರಾಟ ಮಾಡುವಂತೆ ತಾಯಿ-ಮಗನಿಬ್ಬರು ಒತ್ತಾಯಿಸಿದ್ದಾರೆ ಮತ್ತು ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದ್ದಾರೆ ಎಂದು ಕಾರ್ತಿಕ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಡಿವೈಎಸ್ಪಿ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಿದ್ದು, ದೂರುದಾರರು ಮಾಡಿರುವ ಆರೋಪದ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ.

ಕಾರ್ತಿಕ್ ಹಲವು ವರ್ಷಗಳಿಂದ ಪ್ರಜ್ವಲ್ ರೇವಣ್ಣ ಅವರ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಪ್ರಜ್ವಲ್ ಮತ್ತು ಭವಾನಿ ರೇವಣ್ಣ ಅವರಿಂದ ಚಿತ್ರಹಿಂಸೆ ಮತ್ತು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸರನ್ನು ಸಂಪರ್ಕಿಸಿದ್ದರು.

ಈ ವರ್ಷದ ಫೆಬ್ರವರಿಯಲ್ಲಿ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ತನ್ನ 13 ಎಕರೆ ಜಾಗವನ್ನು ಮಾರಾಟ ಮಾಡುವಂತೆ ಇಬ್ಬರು ಒತ್ತಾಯಿಸಿದರು ಎಂದು ದೂರುದಾರರು ಹೇಳಿದ್ದಾರೆ.

Latest Indian news

Popular Stories