554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಇಂದು ಪ್ರಧಾನಿ ಚಾಲನೆ

ಹುಬ್ಬಳ್ಳಿ, ಫೆಬ್ರವರಿ 26: ಅಮೃತ ಭಾರತ ನಿಲ್ದಾಣ ಯೋಜನೆ-2 ಅಡಿ 554 ರೈಲು ನಿಲ್ದಾಣಗಳ ಪುನರ್‌ ಅಭಿವೃದ್ಧಿ ಸೇರಿದಂತೆ ವಿವಿಧೆಡೆ ಒಂದು ಸಾವಿರಕ್ಕೂ ಹೆಚ್ಚು ಮೇಲ್ಸೇತುವೆ ಮತ್ತು ಕೆಳಸೇವೆಗಳ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶೋಮವರ (ಫೆ.26) ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಈ ಬಗ್ಗೆ ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ ಕನಮಡಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಇಂದು ಪ್ರಧಾನಿಯವರು ವರ್ಚುವಲ್‌ ಮೂಲಕ ಪ್ರಧಾನಿ ಮೋದಿಯವರು ಅಭಿವೃದ್ಧಿ ಯೋಜನೆಗಳ ಆರಂಭಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮಗಳಡಿ ಭಾರತದ 554 ರೈಲು ನಿಲ್ದಾಣಗಳ ಮೇಲ್ದರ್ಜೆಗೆ ಏರಲು, ದೇಶದ 554 ರೈಲು ನಿಲ್ದಾಣಗಳ 1,500 ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣ ಕಾರ್ಯ ಶುರುವಾಗಲಿದೆ.ಕರ್ನಾಟಕದ ಮಟ್ಟಿಗೆ ನೋಡುವುದಾದರೆ ಇಲ್ಲಿ ₹656.43 ಕೋಟಿ ವೆಚ್ಚದಲ್ಲಿ 31 ನಿಲ್ದಾಣಗಳನ್ನು ಅಭಿವೃದ್ಧಿಗೊಳ್ಳಲಿವೆ.₹330.62 ಕೋಟಿ ವೆಚ್ಚದಲ್ಲಿ 24 ರಸ್ತೆ ಮೇಲ್ಸೇತುವೆ ಜೊತೆಗೆ ಕೆಳಸೇತುವೆಗಳು ನಿರ್ಮಾಣಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪುನರಾಭಿವೃದ್ಧಿ ನಿಲ್ದಾಣದ ವಿಶೇಷತೆಗಳೇನು?ದಕ್ಷಿಣ-ಮಧ್ಯ ರೈಲ್ವೆಗೆ ಒಳಪಡುವ ಕರ್ನಾಟಕದ ಯಾದಗಿರಿ ಜಿಲ್ಲೆ, ರಾಯಚೂರು ಮತ್ತು ಕೇಂದ್ರ ರೈಲ್ವೆ ವಲಯದ ಗಾಣಗಾಪುರ ರಸ್ತೆ ನಿಲ್ದಾಣವನ್ನು ಸಹ ಈ ಯೋಜನೆ ಅಡಿ ಪುನರಾಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ.ಭವಿಷ್ಯದಲ್ಲಿ ಅಭಿವೃದ್ಧಿಯಾಗಲಿರುವ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಿಫ್ಟ್‌, ಎಸ್ಕಲೇಟರ್‌ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಇಲ್ಲಿ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಲಾಗುತ್ತದೆ. ಬೆಂಗಳೂರು-ಮುಂಬೈ ನಡುವೆ ದ್ವಿಪಥ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ವಿವರಿಸಿದರು.

ರೈಲಿನ ವೇಗ-ವಿದ್ಯುದೀಕರಣದ ವಿವರನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ವಿದ್ಯುದ್ದೀಕರಣ.ಕಾಮಗಾರಿ ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ.ಬೆಂಗಳೂರು-ಜೋಲಾರ್‌ಪೇಟೆ, ಬೆಂಗಳೂರು- ಚೆನ್ನೈ ನಡುವೆ 160 ಕಿಲೋ ಮೀಟರ್ ನೈರುತ್ಯ ರೈಲ್ವೆ ವ್ಯಾಪ್ತಿಯ ಉಳಿದೆಡೆ ಶೀಘ್ರ 130 ಕಿಲೋ ಮೀಟರ್ ವೇಗದಲ್ಲಿ ರೈಲುಗಳು ಸಂಚರಿಸಲಿವೆ

Latest Indian news

Popular Stories