ಶ್ರೀಲಂಕಾ ನೌಕಾಪಡೆಯಿಂದ 6 ಮಂದಿ ಭಾರತೀಯ ಮೀನುಗಾರರ ಬಂಧನ

ನವದೆಹಲಿ: ಅಂತರಾಷ್ಟ್ರೀಯ ನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳುನಾಡಿನ ಆರು ಭಾರತೀಯ ಮೀನುಗಾರರನ್ನು ಶ್ರೀಲಂಕಾದ ನೌಕಾಪಡೆಯು ಅವರ ಟ್ರಾಲರ್‌ನೊಂದಿಗೆ ಶ್ರೀಲಂಕಾದ ಕಂಕಸಂತುರೈ ಪ್ರದೇಶದ ಬಳಿ ಬಂಧಿಸಿದೆ.

ಶ್ರೀಲಂಕಾ ನೌಕಾಪಡೆಯ ಪ್ರಕಾರ, ಮೀನುಗಾರರು ‘ಅಕ್ರಮ ಬೇಟೆ’ಯಲ್ಲಿ ತೊಡಗಿದ್ದಾರೆಂದು ಆರೋಪಿಸಲಾಗಿದ್ದು, ಬುಧವಾರ ವಿಶೇಷ ಕಾರ್ಯಾಚರಣೆಯ ನಂತರ ಕರೇನಗರದ ಕೋವಿಲನ್ ಲೈಟ್‌ಹೌಸ್‌ನಿಂದ ಬಂಧಿಸಲಾಗಿದೆ.

ವಿದೇಶಿ ಮೀನುಗಾರಿಕಾ ಟ್ರಾಲರ್‌ಗಳಿಂದ ಅಕ್ರಮ ಮೀನುಗಾರಿಕೆ ಅಭ್ಯಾಸಗಳನ್ನು ತಡೆಯಲು ನೌಕಾಪಡೆಯು ಶ್ರೀಲಂಕಾದ ನೀರಿನಲ್ಲಿ ನಿಯಮಿತ ಗಸ್ತು ಮತ್ತು ಕಾರ್ಯಾಚರಣೆಗಳನ್ನು ಮುಂದುವರೆಸಿದೆ.

6 ಮಂದಿ ಮೀನುಗಾರರು ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಗೆ ಸೇರಿದವರು. ಆರು ಮಂದಿಯಲ್ಲಿ ಐವರು ಮೀನುಗಾರರನ್ನು ಗುರುತಿಸಲಾಗಿದೆ. ಅವರುಗಳೆಂದರೆ, ನರೇಶ್ (27), ಆನಂದಬಾಬು (25), ಅಜಯ್ (24), ನಂದಕುಮಾರ್ (28) ಮತ್ತು ಅಜಿತ್ (26). ಆರನೇ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

Latest Indian news

Popular Stories