ಮೆಕ್ಸಿಕೊ ನಗರದಲ್ಲಿ ಭಾರತೀಯ ಪ್ರಜೆಯ ಗುಂಡಿಕ್ಕಿ ಹತ್ಯೆ, ಮತ್ತೊಬ್ಬನಿಗೆ ಗಾಯ

ಮೆಕ್ಸಿಕೋ: ಉತ್ತರ ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಅಪರಿಚಿತ ದಾಳಿಕೋರರು ದರೋಡೆ ಮಾಡಿ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದ ಭಾರತೀಯ ಪ್ರಜೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಮತ್ತೊಬ್ಬರು ಗಾಯಗೊಂಡಿದ್ದಾರೆ. ಭಾರತೀಯ ಅಧಿಕಾರಿಗಳು ಮೆಕ್ಸಿಕನ್ ಅಧಿಕಾರಿಗಳ ಬಳಿ ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಘಟನೆ ಶನಿವಾರ ನಡೆದಿದ್ದು, ದಾಳಿಕೋರರು ಭಾರತೀಯ ಪ್ರಜೆಗಳಿಂದ 10,000 ಡಾಲರ್ ದರೋಡೆ ಮಾಡಿದ್ದಾರೆ, ಅವರ ಗುರುತು ಪತ್ತೆಯಾಗಿಲ್ಲ. ಮೆಕ್ಸಿಕೋ ಸಿಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಿಂದ ಹಣವನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಎಲ್ ಯುನಿವರ್ಸಲ್ ಪತ್ರಿಕೆ ವರದಿ ಮಾಡಿದೆ.

ಅವರಲ್ಲಿ ಒಬ್ಬರು ಗುಂಡೇಟಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.ಮತ್ತೊಬ್ಬರು ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಕ್ಸಿಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದು, ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ.

“ಅತ್ಯಂತ ವಿಷಾದನೀಯ ಮತ್ತು ಹೃದಯ ವಿದ್ರಾವಕ ಘಟನೆಯಲ್ಲಿ, ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದ ಭಾರತೀಯ ಪ್ರಜೆಯನ್ನು ದುರಂತವಾಗಿ ಗುಂಡಿಕ್ಕಿ ಕೊಂದಿದ್ದಾರೆ. ರಾಯಭಾರ ಕಚೇರಿ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ ಮತ್ತು ಎಲ್ಲಾ ಬೆಂಬಲವನ್ನು ನೀಡುತ್ತಿದೆ. ನಾವು ಅಪರಾಧಿಗಳನ್ನು ಬಂಧಿಸಲು ಮೆಕ್ಸಿಕನ್ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದೇವೆ” ಎಂದು ರಾಯಭಾರ ಕಚೇರಿ ತಿಳಿಸಿದೆ. 

Latest Indian news

Popular Stories