ನಂಬರ್ ಒನ್ ಸ್ಥಾನ ಸಮೀಪಿಸಿದ ನೊವಾಕ್‌ ಜೊಕೋವಿಕ್‌

ಜೊಕೋವಿಕ್‌ ಕಳೆದ ಬಾರಿಯ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ಆಡಿರಲಿಲ್ಲ. ಕೋವಿಡ್‌-19 ಲಸಿಕೆ ಪಡೆಯದ ವಿದೇಶಿಗರಿಗೆ ನ್ಯೂಯಾರ್ಕ್‌ ಪ್ರವೇಶವನ್ನು ನಿಷೇಧಿಸಿದ್ದೇ ಇದಕ್ಕೆ ಕಾರಣ.

ಟಾಪ್‌-10 ಎಟಿಪಿ ರ್‍ಯಾಂಕಿಂಗ್‌ನಲ್ಲಿ ಒಂದೆರಡು ಬದಲಾವಣೆ ಸಂಭವಿಸಿದೆ. ಡೆನ್ಮಾರ್ಕ್‌ನ ಹೋಲ್ಜರ್‌ ರುನೆ ಒಂದು ಸ್ಥಾನ ಮೇಲೇರಿ 4ನೇ ರ್‍ಯಾಂಕಿಂಗ್‌ ಪಡೆದಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಆಗಿದೆ. ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ 3 ಸ್ಥಾನ ಕುಸಿದು 7ಕ್ಕೆ ಬಂದಿದ್ದಾರೆ.

ಆರಕ್ಕೇರಿದ ಗಾಫ್
ಸಿನ್ಸಿನಾಟಿ ವನಿತಾ ಚಾಂಪಿಯನ್‌ ಕೊಕೊ ಗಾಫ್ ನೂತನ ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಮೇಲೇರಿ 6ನೇ ಸ್ಥಾನಕ್ಕೆ ಬಂದಿದ್ದಾರೆ. ಪರಾಜಿತ ಕ್ಯಾರೋಲಿನಾ ಮುಕೊÕàವಾ ಮೊದಲ ಸಲ ಟಾಪ್‌-10 ಯಾದಿಯನ್ನು ಅಲಂಕರಿಸಿದ್ದಾರೆ. 32ರ ಸುತ್ತಿನಲ್ಲಿ ಸ್ಲೋನ್‌ ಸ್ಟೀಫ‌ನ್ಸ್‌ಗೆ ಶರಣಾದ ಕಳೆದ ಬಾರಿಯ ಚಾಂಪಿಯನ್‌ ಕ್ಯಾರೋಲಿನ್‌ ಗಾರ್ಸಿಯಾ 7ನೇ ಸ್ಥಾನಕ್ಕೆ ಇಳಿದಿದ್ದಾರೆ.

ಬರೋಬ್ಬರಿ 4 ಗಂಟೆಗಳ ಕಾದಾಟದಲ್ಲಿ ವಿಶ್ವದ ನಂ.1 ಟೆನಿಸಿಗ ಕಾರ್ಲೋಸ್‌ ಅಲ್ಕರಾಜ್‌ ಅವರನ್ನು ಮಣಿಸಿದ ನೊವಾಕ್‌ ಜೊಕೋವಿಕ್‌ “ಸಿನ್ಸಿನಾಟಿ ಓಪನ್‌’ ಚಾಂಪಿಯನ್‌ ಆಗಿ ಮೂಡಿ ಬಂದಿದ್ದಾರೆ. ಜಿದ್ದಾಜಿದ್ದಿ ಫೈನಲ್‌ನಲ್ಲಿ ಜೊಕೋವಿಕ್‌ 5-7, 7-6 (9-7), 7-6 (7-4) ಅಂತರದ ಜಯ ಸಾಧಿಸಿದರು.
ಇದು ಕಳೆದ ವಿಂಬಲ್ಡನ್‌ ಫೈನಲ್‌ನ “ರೀ ಮ್ಯಾಚ್‌’ ಆಗಿತ್ತು. ಆದರೆ ಫ‌ಲಿತಾಂಶ ಪುನರಾವರ್ತನೆ ಗೊಳ್ಳಲಿಲ್ಲ. ಅಲ್ಲಿ ಅಲ್ಕರಾಜ್‌ ಅವರಿಂದ ಆಘಾತ ಅನುಭವಿಸಿದ ಜೊಕೋ ವಿಕ್‌ ಸಿನ್ಸಿನಾಟಿಯಲ್ಲಿ ಸೇಡು ತೀರಿಸಿ ಕೊಳ್ಳುವಲ್ಲಿ ಯಶಸ್ವಿಯಾದರು. ವರ್ಷಾಂತ್ಯದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ಗೆ ಹೊಸ ಹುರುಪಿ ನಿಂದ ಸಜ್ಜಾದರು.

ಆದರೆ ಜೊಕೋವಿಕ್‌ಗೆ ಇದೇನೂ ಸುಲಭ ಗೆಲುವಾಗಿರಲಿಲ್ಲ. ಮೊದಲ ಸೆಟ್‌ ಕಳೆದುಕೊಂಡು ಹಿನ್ನಡೆ ಅನು
ಭವಿಸಿದರು. ದ್ವಿತೀಯ ಸೆಟ್‌ ವೇಳೆ ಒಮ್ಮೆ ಅಲ್ಕರಾಜ್‌ 4-2ರ ಮುನ್ನಡೆ ಯೊಂದಿಗೆ ಗೆಲುವಿನತ್ತ ದಾಪುಗಾಲಿಕ್ಕು ತ್ತಿದ್ದರು. ಆಗ 36 ವರ್ಷದ ಜೊಕೋ ತಮ್ಮ ಅಷ್ಟೂ ಅನುಭವವನ್ನು ತೆರೆದಿರಿಸಿದರು. ಇದಕ್ಕೆ ಸರಿಯಾಗಿ ಅಲ್ಕರಾಜ್‌ ಅವರಿಂದಲೂ ಕಳಪೆ ಪ್ರದರ್ಶನ ಕಂಡುಬಂತು. ರೋಚಕ ಟೈ ಬ್ರೇಕರ್‌ ಗೆದ್ದ ಸರ್ಬಿಯನ್‌ ಆಟಗಾರ ಪಂದ್ಯವನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾದರು.

ನಿರ್ಣಾಯಕ ಸೆಟ್‌ನಲ್ಲಿ ಜೊಕೋವಿಕ್‌ ಮತ್ತೊಮ್ಮೆ ಪಕ್ವ ಪ್ರದರ್ಶನ ವಿತ್ತರು. 5-3ರ ಮುನ್ನಡೆ ಸಾಧಿಸಿ ದರು. ಈ ಹಂತದಲ್ಲಿ ಅಲ್ಕರಾಜ್‌ ಮುನ್ನುಗ್ಗಿ ಬಂದರು. ಮತ್ತೂಂದು ಟೈ ಬ್ರೇಕರ್‌ ಎದುರಾಯಿತು. ಇಲ್ಲಿ ಜೊಕೋ ಕೈ ಮೇಲಾಯಿತು.

95ನೇ ಪ್ರಶಸ್ತಿ
ಇದು ನೊವಾಕ್‌ ಜೊಕೋವಿಕ್‌ ಅವರ ಟೆನಿಸ್‌ ಬಾಳ್ವೆಯ 95ನೇ ಪ್ರಶಸ್ತಿಯಾದರೆ, 39ನೇ ಮಾಸ್ಟರ್ 1000 ಕಿರೀಟವಾಗಿದೆ. ತನಗೆ ಇದು ಗ್ರ್ಯಾನ್‌ಸ್ಲಾಮ್‌ ಫೈನಲ್‌ಗ‌ೂ ಮಿಗಿಲಾದ ಅನುಭವ ಕೊಟ್ಟ ಪಂದ್ಯ ಎಂಬುದು ಜೊಕೋವಿಕ್‌ ಪ್ರತಿಕ್ರಿಯೆ ಆಗಿತ್ತು.

ಕೊಕೊ ಗಾಫ್,ಏರಿತು ಗ್ರಾಫ್…ಮೊದಲ ಮಾಸ್ಟರ್ 1000 ಪ್ರಶಸ್ತಿ

ವನಿತಾ ವಿಭಾಗದ ಪ್ರಶಸ್ತಿ ಆತಿಥೇಯ ನಾಡಿನ ಕೊಕೊ ಗಾಫ್ ಪಾಲಾಯಿತು. ಅವರು ಈ ವರ್ಷದ ಫ್ರೆಂಚ್‌ ಓಪನ್‌ ಫೈನಲಿಸ್ಟ್‌, ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಮುಚ್ಹೊವಾ ವಿರುದ್ಧ 6-3, 6-4 ಅಂತರದ ಗೆಲುವು ಸಾಧಿಸಿದರು. ಒಂದು ಗಂಟೆ, 56 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು. ಇದು ಗಾಫ್ಗೆ ಒಲಿದ ಮೊದಲ ಮಾಸ್ಟರ್ 1000 ಪ್ರಶಸ್ತಿ.

19 ವರ್ಷದ ಕೊಕೊ ಗಾಫ್ ಕಳೆದ 55 ವರ್ಷಗಳ ಸಿನ್ಸಿನಾಟಿ ಟೂರ್ನಿಯ ಇತಿಹಾಸದಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ಅತೀ ಕಿರಿಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಅಂದು (1968ರಲ್ಲಿ) 17 ವರ್ಷದ ಲಿಂಡಾ ಟ್ಯುರೊ ಚಾಂಪಿಯನ್‌ ಆಗಿದ್ದರು.

“ಇದನ್ನು ನಂಬಲಾಗುತ್ತಿಲ್ಲ. ಈ ಕ್ಷಣದಲ್ಲಿ ಇಲ್ಲಿರುವುದಕ್ಕೆ ಬಹಳ ಖುಷಿ ಆಗುತ್ತಿದೆ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ಯಾರೋಲಿನಾಗೆ ಅಭಿನಂದನೆಗಳು’ ಎಂಬುದಾಗಿ ಕೊಕೊ ಗಾಫ್ ಹೇಳಿದರು.
ಇಲ್ಲಿ ಚಾಂಪಿಯನ್‌ ಆಗಿದ್ದರೆ ಕ್ಯಾರೋಲಿನಾ ಮುಕೊವಾ ಅವರ ಸೋಮವಾರದ ಬರ್ತ್‌ಡೇ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಆದರೆ ಸೋಲಿನ ಹೊರತಾಗಿಯೂ ಅವರು ನೂತನ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ 10ನೇ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

Latest Indian news

Popular Stories