ಸೌದಿ ಆರೇಬಿಯಾದಲ್ಲಿ ನಾಳೆಯಿಂದ (ಸೋಮವಾರ) ರಂಝಾನ್ ತಿಂಗಳು ಆರಂಭವಾಗಲಿದೆ.
ಚಂದ್ರ ದರ್ಶನವಾದ ಕಾರಣ ರಂಝಾನ್ ನ ಮೊದಲ ಉಪವಾಸ ಸೋಮವಾರದಿಂದ ಸೌದಿಯಲ್ಲಿ ಆರಂಭವಾಗಲಿದೆ. ಇಂದು ಮಾರ್ಚ್ 10, ಶಾಬಾನ್ ತಿಂಗಳ ಕೊನೆಯ ದಿನವಾಗಿದ್ದು, ಮಾರ್ಚ್ 11ರ ಸೋಮವಾರದಂದು ಪವಿತ್ರ ಮಾಸ ಆರಂಭವಾಗಲಿದೆ.
ರಂಜಾನ್, ಇಸ್ಲಾಮಿಕ್ ಕ್ಯಾಲೆಂಡರ್‌ನಿಂದ ನಿರ್ಧರಿಸಲ್ಪಡುತ್ತದೆ. ಇದರಲ್ಲಿ ತಿಂಗಳುಗಳು 29 ಅಥವಾ 30 ದಿನಗಳವರೆಗೆ ಇರುತ್ತದೆ. ಚಂದ್ರ ದರ್ಶನದ ಆಧಾರದ ಮೇಲೆ ಪ್ರಾರಂಭವಾಗುತ್ತದೆ.