ವಂದೇ ಭಾರತ್ ಎಕ್ಸ್‌ಪ್ರೆಸ್‌ಗಾಗಿ ಇತರೆ ರೈಲುಗಳ ನಿಲುಗಡೆ ವಿರೋಧಿಸಿ ಪ್ರತಿಭಟನೆ

ಎರ್ನಾಕುಲಂ,: ವಂದೇ ಭಾರತ್ ರೈಲುಗಳು ಅಡೆತಡೆ ಇಲ್ಲದೆ ಸಂಚರಿಸಲು ಇತರೆ ರೈಲಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಎಂದು ಆರೋಪಿಸಿ ಎರ್ನಾಕುಲಂ-ಕಾಯಂಕುಲಂ ಅನ್‌ರಿಸರ್ವ್ಡ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ. 06451) ನಲ್ಲಿ ಕಪ್ಪು ಮಾಸ್ಕ್ ಧರಿಸಿ ರೈಲಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.

ಎರ್ನಾಕುಲಂ- ಕಾಯಂಕುಲಂ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳ ಹಿಂದಿನ ವೇಳಾಪಟ್ಟಿಯನ್ನು ಎಂದಿನಂತೆ ಮುಂದುವರೆಸಬೇಕು. ವಂದೇ ಭಾರತ್‌ಗಾಗಿ ಇತರೆ ರೈಲುಗಳನ್ನು ವಿಳಂಬ ಮಾಡುವುದು ನಮ್ಮ ಕೆಲಸದ ಸ್ಥಳಗಳಿಗೆ ಸರಿಯಾದ ಸಮಯಕ್ಕೆ ತಲುಪುವುದು ಸೇರಿದಂತೆ ದೈನಂದಿನ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರುತ್ತದೆ.

ಎರ್ನಾಕುಲಂ- ಕಾಯಂಕುಲಂ ಅನ್‌ರಿಸರ್ವ್ಡ್ ಎಕ್ಸ್‌ಪ್ರೆಸ್ ಎರ್ನಾಕುಲಂ ಜಂಕ್ಷನ್‌ನಿಂದ ಬೆಳಿಗ್ಗೆ 6 ಗಂಟೆಗೆ ಹೊರಡುತ್ತಿತ್ತು. ವಂದೇ ಭಾರತ್ ರೈಲು ಪ್ರಾರಂಭವಾದಗಿನಿಂದ ವೇಳಾಪಟ್ಟಿಯನ್ನು 6.05 ಕ್ಕೆ ಬದಲಾಯಿಸಲಾಯಿತು. ಈ ವಿಳಂಬದಿಂದಾಗಿ ಕುಂಬಳಂ ನಿಲ್ದಾಣದಲ್ಲಿ ಸುಮಾರು 40 ನಿಮಿಷದಿಂದ ಒಂದು ಗಂಟೆಯವರೆಗೆ ರೈಲು ನಿಲ್ಲಬೇಕಾಯಿತು. ನಂತರ ಆರಂಭದ ಸಮಯವನ್ನು 6.25 ಗಂಟೆಗೆ ಮರು ನಿಗದಿಪಡಿಸಲಾಗಿದ್ದು, ಹಲವಾರು ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ಅವರು ಹೇಳಿದರು.

Latest Indian news

Popular Stories