ಬೆಂಗಳೂರು :ರಾಜ್ಯಾದ್ಯಂತ ಬಿಸಿಯೂಟ ನೌಕರರಿಂದ ಬೆಂಗಳೂರು ಚಲೋ ಚಳುವಳಿ

ಕಲಬುರಗಿ (ಅ.9) : ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಕ್ಟೋಬರ್ 10ರಂದು ಬೆಂಗಳೂರಿನ ಫ್ರೀಡಮ್ ಪಾರ್ಕ್‍ನಲ್ಲಿ ರಾಜ್ಯಾದ್ಯಂತ ಬಿಸಿಯೂಟ ನೌಕರರು ಬೆಂಗಳೂರು ಚಲೋ ಚಳುವಳಿ ಹಮ್ಮಿಕೊಂಡಿದ್ದಾರೆ.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಅಧ್ಯಕ್ಷ ಪ್ರಭುದೇವ್ ಯಳಸಂಗಿ ಈ ಬಗ್ಗೆ .

ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಅನಿರ್ಧಿಷ್ಟ ಧರಣಿಯಲ್ಲಿ ಜಿಲ್ಲೆಯಿಂದ ಸುಮಾರು 150 ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಬಿಸಿಯೂಟ ತಯಾರಕರು ಪಾಲ್ಗೊಳ್ಳುವರು ಎಂದಿದ್ದಾರೆ.

ರಾಜ್ಯದಲ್ಲಿ ಸುಮಾರು 18000ಕ್ಕಿಂತ ಹೆಚ್ಚು ಜನ ಬಿಸಿಯೂಟ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ, ಅವರಿಗೆ ಕನಿಷ್ಠ ವೇತನವನ್ನು ಇಲ್ಲಿಯವರೆಗಿನ ಸರ್ಕಾರಗಳು ನೀಡಿಲ್ಲ. ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಪಕ್ಷದ ರಾಷ್ಟ್ರೀಯ ಮುಖಂಡೆ ಪ್ರಿಯಾಂಕಾ ವಾಡ್ರಾ ಅವರು ಬಹಿರಂಗ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿಯೂಟ ನೌಕರರಿಗೆ ಮಾಸಿಕ 6000 ರು.ಗಳ ವೇತನ ಹಾಗೂ 2.5 ಲಕ್ಷ ಇಡಿಗಂಟು, ನಿವೃತ್ತಿ ವೇತನ ಕೊಡುವ ಕುರಿತು ಘೋಷಣೆ ಮಾಡಿದರು.

Latest Indian news

Popular Stories