ಕೆಇಎ ಪರೀಕ್ಷಾ ಅಕ್ರಮ; ಹಾಸ್ಟೇಲ್ ವಾರ್ಡನ್ ಅರೆಸ್ಟ್

ಕಲಬುರ್ಗಿ: ಕೆಇಎ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಪರೀಕ್ಷಾ ಮೇಲ್ವಿಚಾರಕರಿಗೆ ಹಣ ನೀಡಿದ ಆರೋಪದಲ್ಲಿ ಹಾಸ್ಟೇಲ್ ವಾರ್ಡನ್ ಓರ್ವನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಬಸವರಾಜ್ ಯಳವಾರ್ ಬಂಧಿತ ಆರೋಪಿ. ಸಮಾಜ ಕಲ್ಯಾಣ ಇಲಾಖೆಯ ಚಿಕ್ಕಬಳ್ಳಾಪುರದ ವೃತ್ತಿಪರ ಹಾಸ್ಟೇಲ್ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ.ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಆರೋಪಿ ಬಂಧಿಸಲ್ಪಟ್ಟಿದ್ದಾನೆ.

ಕೆಇಎ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ. ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ಪ್ರಾಂಶುಪಾಲರಿಗೆ 40 ಲಕ್ಷ ಹಣ ನೀಡಿದ್ದ ಎಂದು ಸಿಐಡಿ ತನಿಖೆ ವೇಳೆ ತಿಳಿದುಬಂದಿದೆ. ಈತನ ವಿರುದ್ಧ ಕಲಬುರ್ಗಿಯ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೇಸ್ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಬಸವರಾಜ್ ಹಾಸ್ಟೇಲ್ ವಾರ್ಡನ್ ಆಗಿದ್ದ. ಇದೀಗ ಸಿಐಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Latest Indian news

Popular Stories