ಜೂನ್ ೨೧ ರಿಂದ ವಾರಂತ್ಯದ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಆದೇಶ

ಕಲಬುರಗಿ,ಜೂನ್.೨೨.(ಕ.ವಾ)-ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ವಿಧಿಸಲಾಗಿದ್ದ ಕರ್ಫ್ಯೂಯಲ್ಲಿ ಸಡಿಲಿಕೆ ನೀಡಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರದಾದ್ಯಂತ ಇದೇ ಜೂನ್ ೨೧ರ ಬೆಳಿಗ್ಗೆ ೬ ಗಂಟೆಯಿAದ ೨೦೨೧ರ ಜುಲೈ ೫ರ ಬೆಳಿಗ್ಗೆ ೫ ಗಂಟೆಯವರೆಗೆ ಕೆಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಿ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಕಲಂ ೩೪ (ಎಂ) ಹಾಗೂ ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ರ ಕಲಂ ೧೪೪ ರನ್ವಯ ವಾರಾಂತ್ಯದ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ವೈ.ಎಸ್. ರವಿಕುಮಾರ್ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.

ಸಿ.ಆರ್.ಪಿ.ಸಿ. ಕಾಯ್ದೆ ೧೯೭೩ರ ಕಲಂ ೧೪೪ ರನ್ವಯ ಕಲಬುರಗಿ ನಗರದಾದ್ಯಂತಹ ಇದೇ ಜೂನ್ ೨೧ ರಿಂದ ಜುಲೈ ೫ ರವರೆಗೆ ಪ್ರತಿದಿನ ರಾತ್ರಿ ೭ ರಿಂದ ಬೆಳಗಿನ ೫ ಗಂಟೆಯವರೆಗೆ ನೈಟ್ ಕರ್ಫ್ಯೂ ಹಾಗೂ ಪ್ರತಿ ಶುಕ್ರವಾರ ರಾತ್ರಿ ೭ ಗಂಟೆಯಿAದ ಸೋಮವಾರ ಬೆಳಿಗ್ಗೆ ೫ ಗಂಟೆಯವರೆಗೆ ವಾರಂತ್ಯದ ಕರ್ಫ್ಯೂ ಜಾರಿಗೊಳಿಸಿ ಅವರು ಆದೇಶ ಹೊರಡಿಸಿದ್ದಾರೆ.
ಜೂನ್ ೨೩ ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಜೂನ್.೨೨.(ಕ.ವಾ.)-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಗೋದುತಾಯಿ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಪ್ರಯುಕ್ತ ಬುಧವಾರ ಜೂನ್ ೨೩ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜೆಸ್ಕಾಂನೊAದಿಗೆ ಸಹಕರಿಸುವಂತೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು(ವಿ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಗೋದುತಾಯಿ ಫೀಡರ್: ಜಿ.ಡಿ.ಎ. ಧರಿಯಾಪೂರ, ರೆಹಮತ್ ನಗರ, ಪಿ.ಡಬ್ಲೂö್ಯ್ಲ.ಡಿ. ಕ್ವಾಟರ‍್ಸ್, ಎನ್.ಜಿ.ಓ. ಕಾಲೋನಿ (ರೈಲ್ವೆ ಟ್ರಾö್ಯಕ್), ದತ್ತ ನಗರ, ಚಿತ್ತಾರಿ ಸ್ವಾ ಮಿಲ್ ಏರಿಯಾ, ಮಾಕಾ ಲೇಔಟ್, ಜಾಧವ್ ಲೇಔಟ್, ಅಂಬಿಕಾ ನಗರ, ರುದ್ರವಾಡಿ ಆಸ್ಪತ್ರೆ ಏರಿಯಾ, ಬಿ.ಸಿ.ಎಂ. ಕಚೇರಿ, ಡೆಂಕಿನಭಾವಿ, ಹುದಾ ಮಸೀದಿ ಅಂಡರ್ ಬ್ರಿಡ್ಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Latest Indian news

Popular Stories