ಸುಂದರ ನಗರ (ಸ್ಮಾರ್ಟ್ ಸಿಟಿ) ವಾಗುವತ್ತ ಸಾಗುತ್ತಿರುವ ಮಂಗಳೂರು ಅವ್ಯವಸ್ಥೆಗಳ ಆಗರವಾಗಿದಿರಲಿ: ದ.ಕ.ಜಿಲ್ಲಾ ವಕ್ತಾರ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ಮಂಗಳೂರು. ಡಿ.18: ಮಂಗಳೂರು ನಗರವು ಸುಧಾರಣೆಗೊಳ್ಳಲು ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರೂ, ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ನಮ್ಮ ಸ್ಥಳೀಯಾಡಳಿತದ ಕೆಲವು ಅರೆಬರೆ ಕೆಲಸ, ಪರಿಪೂರ್ಣತೆಯ(ಫಿನಿಷಿಂಗ್) ಕೊರತೆಯಿಂದಾಗಿರುವ ಅಪೂರ್ಣತೆ ಮತ್ತು ಗುತ್ತಿಗೆದಾರರ ಬಗ್ಗೆ ನಿಗಾ ವಹಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ, ವಿವಿಧ ಕಾಮಗಾರಿಗಳಲ್ಲಿ ಎಲ್ಲಿಂದೆರಲ್ಲಿ ಎಡವಟ್ಟುಗಳನ್ನು ಕಾಣಬಹುದಾಗಿದೆ.

ಮಹಾ ನಗರ ಪಾಲಿಕೆ ವ್ಯಾಪ್ತಿಯ ಕೇಂದ್ರಸ್ಥಳ ಎನ್ನಬಹುದಾದ ಖಾಸಗಿ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯು ಮಂಗಳೂರು ಪೊಲೀಸ್ ಕಮಿಷನರ್ ಕಛೇರಿ ಎದುರಿನಿಂದ ಆರಂಭಿಸಿ ಮೈದಾನ್ ರೋಡ್ ಸಂಧಿಸುವವರೆಗೂ ಹದಗೆಟ್ಟಿದ್ದು, ಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಉಪನಗರ ಮತ್ತು ಪ್ರಮುಖ ಪಟ್ಟಣ ಪ್ರದೇಶಗಳನ್ನೂ ಸಂಪರ್ಕಿಸುವ ಖಾಸಗಿ ಹಾಗೂ ಸರಕಾರಿ ಬಸ್ಸುಗಳ ನಿಲ್ದಾಣವಾಗಿರುವ ಇಲ್ಲಿಗೆ ಬರುವ ಪ್ರಯಾಣಿಕರು ಇಷ್ಟೊಂದು ಸುಂದರ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಬರಬೇಕಾದ ಅನಿವಾರ್ಯತೆ ಎದುರಾಗಿದೆ ಅದರಲ್ಲೂ, ದ್ವಿಚಕ್ರ ವಾಹನ ಸವಾರರು, ಹಿರಿಯನಾಗರಿಕರು ಮಹಿಳೆಯರು ಇಲ್ಲಿ ಸಂಚರಿಸಲುಪಡುತ್ತಿರುವ ಬವಣೆ ದಯನೀಯವಾಗಿದೆ.


ಎರಡನೆಯದಾಗಿ, ಓಲ್ಡ್ ಕೆಂಟ್ ರಸ್ತೆಯಲ್ಲಿನ ಅಗ್ನಿಶಾಮಕ ದಳದ ಕಛೇರಿ ಬಳಿಯ ವೃತ್ತದ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸದೆ,
ಇಲ್ಲಿನ ವೃತ್ತದ ಭಾಗಕ್ಕೆ ಕಾಂಟ್ರೀಕರಣವಾಗದೆ, ಅಷ್ಟೊಂದು ಭಾಗಗಳಿಗೆ ಕನಿಷ್ಠ ಕಲ್ಲುಗಳನ್ನಾದರೂ, ಅಡ್ಡ ಇಡದೆ, ಅಪಾಯಕ್ಕೆ ಆಹ್ವಾನ ನೀಡಿದೆ,
ಮೂರನೆಯದಾಗಿ ನೆಹರೂ ಮೈದಾನದಲ್ಲಿ ಎದುರು ರಸ್ತೆಯ ಸೈದಾನಿ ದರ್ಗಾ ಪರಿಸರದ ರಸ್ತೆ ಕಾಂಟ್ರೀಕರಣ ಮುಗಿದಿದ್ದರೂ ಅದೇ ಸಂದರ್ಭದಲ್ಲಿ ಅಲ್ಲಿನ ಬೀದಿದೀಪಗಳ ಕೇಬಲ್ ಗಳನ್ನೂ ಪೂರ್ಣವಾಗಿ ಭೂಮಿಯಡಿಯಿಂದ (ಅಂಡರ್ ಗ್ರೌಂಡ್ ಸಿಸ್ಟಮ್ ನಲ್ಲಿ) ತರಲಾಗಿದ್ದು, ಅಲ್ಲಿಯೂ ಒಂದನ್ನು ಬಾಕಿ ಉಳಿಸಿದೆ. ಈಗ ಆಲ್ಲಿ ರಸ್ತೆ ಮೇಲಿನಿಂದ ಅಡ್ಡಲಾಗಿ ವಿದ್ಯುತ್ ಕೇಬಲ್ ಗಳನ್ನು ಅಲ್ಲಿಂದ ಇಲ್ಲಿಗೆಯೆಂದು ಎಲ್ಲೆಂದರಲ್ಲಿ ಎಳೆದು ನೇತಾಡುವ ಒಂದೆರಡು ಕಂಬಗಳ ದೃಶ್ಯವನ್ನೂ ಕಾಣಬಹುದಾಗಿದೆ.
ನಾಲ್ಕನೆಯದಾಗಿ, ಪೂರ್ತಿಗೊಳಿಸಿದ ಕೆಲಸಗಳ ಗುಣಮಟ್ಟವನ್ನು ನೋಡುವವರು (quality control) ಅಧಿಕಾರಿಗಳು ಯಾರೊಬ್ಬರೂ ಇಲ್ಲವೇ ಎಂಬುವುದಕ್ಕೆ ನಿದರ್ಶನವೆಂಬಂತೆ ಕಳಪೆ ಕಾಮಗಾರಿಯ ನಿರ್ಲಕ್ಷ್ಯತೆಗೆ, ಉದಾಹರಣೆ ಬೇಕಿದ್ದರೆ, ನಗರದ ಪ್ರಧಾನ ಬಿಂದು ಎನ್ನಬಹುದಾದ ಸ್ಟೇಟ್ ಬ್ಯಾಂಕ್ ನಿಂದ ರೊಸರಿಯೋ ಚರ್ಚ್, ಸ್ಕೂಲ್ ಗಳತ್ತ ಸಾಗುವ ರಸ್ತೆಯಲ್ಲಿನ ದುರವಸ್ಥೆಯನ್ನು ನೋಡಿದರೆ ತಿಳಿಯುತ್ತದೆ. ಆಲ್ಲಿನ ರಸ್ತೆ ಕಾಂಕ್ರಿಟೀಕರಣ ಇತ್ತೀಚೆಗೆಷ್ಟೇ ಮುಗಿದಿದ್ದು, ಈಗಾಗಲೇ ಅದರಲ್ಲಿನ ಡ್ರೈನೇಜ್ ಮುಚ್ಚಳ ಮುರಿದು ಅದರ ಮೇಲೆ ಬ್ಯಾರಿಕೇಡ್ ಇಟ್ಟಿರುವುದನ್ನು ಕಾಣಬಹುದು. ಹೀಗೆ ಅರೆಬರೆ, ಕಳಪೆ ಕೆಲಸಗಳನ್ನೂ, ಅಲ್ಲಲ್ಲಿ ಅಪೂರ್ಣವಾಗಿಸಿಯೂ ಬೇಕಾಬಿಟ್ಟಯಾಗಿಸಿಕೊಂಡು, ಇವೆಲ್ಲವುಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಲಿದೆಯೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಜಿಲ್ಲಾ ವಕ್ತಾರ ಎಸ್ ಎಮ್. ಮುತ್ತಲಿಬ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

IMG 20211218 WA0004 Dakshina Kannada

Latest Indian news

Popular Stories