ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿ ಮತ್ತು ಸುರಕ್ಷಾ ಕಿಟ್ ವಿತರಣೆ

ಕಲಬುರಗಿ,ಜೂನ್.೨೯.(ಕ.ವಾ)-ಕೋವಿಡ್ ಎರಡನೇ ಅಲೆ ಕಾರಣ ಸಂಕಷ್ಠದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಮಂಗಳವಾರ ಕಲ್ಯಾಣ ಕರ್ನಾಟಕ ಅಭಿವೃಧ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಮಾಟೀಲ್ ರೇವೂರ ಅವರು ಮಂಡಳಿಯ ಕಚೇರಿ ಆವರಣದಲ್ಲಿ ಸಾಂಕೇತಿವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರ ಸಾಮಗ್ರಿ ಮತ್ತು ಸುರಕ್ಷಾ ಕಿಟ್‌ಗಳನ್ನು ವಿತರಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿAದ ಕಟ್ಟಡ ಕಾರ್ಮಿಕರಿಗೆ ಅಹಾರಧಾನ್ಯ ಒಳಗೊಂಡ ಆಹಾರ ಕಿಟ್ ಮತ್ತು ಕೆಲಸದಲ್ಲಿ ಬೇಕಾಗುವ ಸುರಕ್ಷಾ ಮತ್ತು ನೈರ್ಮಲೀಕರಣದ ಕಿಟ್‌ಗಳನ್ನು ನೀಡಲಾಗುತ್ತಿದ್ದು, ಮಂಗಳವಾರ ಇದಕ್ಕೆ ಚಾಲನೆ ನೀಡಲಾಯಿತು.

ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಒಳಗೊಂಡAತೆ ವಿವಿಧ ವೃತ್ತಿಯಲ್ಲಿರುವ ಬಡವರಿಗೆ ಹಣಕಾಸು ಪ್ಯಾಕೇಜುಗಳನ್ನು ಘೋಷಣೆ ಮಾಡುವುದರ ಮೂಲಕ ಕಾರ್ಮಿಕರ ನೆರವಿಗೆ ನಿಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮುಂಬರುವ ದಿನದಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಸುಮಾರು ೧೦ ಸಾವಿರ ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಗುತ್ತದೆ ಎಂದು ದತ್ತಾತ್ರೇಯ ಪಾಟೀಲ ತಿಳಿಸಿದರು.
ಆಹಾರಧಾನ್ಯ ಕಿಟ್ ತೊಗರಿ ಬೇಳೆ ೧ ಕೆ.ಜಿ., ಅಡುಗೆ ಎಣ್ಣೆ ೧ ಲೀಟರ್, ಗೋಧಿ ಹಿಟ್ಟು ೨ಕೆ.ಜಿ., ಅವಲಕ್ಕಿ ೧ಕೆ.ಜಿ, ಉಪ್ಪು ೧ ಕೆ.ಜಿ, ಸಾಂಬಾರ್ ಪೌಡರ್ ಪ್ಯಾಕೇಟು, ಖಾರಪುಡಿ ಪಾಕೇಟು, ಸಕ್ಕರೆ ೧ಕೆ.ಜಿ, ರವಾ ೧ಕೆ.ಜಿ ಮತ್ತು ಅಕ್ಕಿ ೫ ಕೆ.ಜಿ ಒಳಗೊಂಡಿದೆ.

ಸುರಕ್ಷಾ ಹಾಗೂ ನೈರ್ಮಲ್ಯಿಕರಣ ಕಿಟ್‌ಗಳ ಪೈಕಿ ಮಹಿಳಾ ಕಾರ್ಮಿಕರಿಗೆ ನೀಡಲಾಗುವ ಪಿಂಕ್ ಬಣ್ಣದ ಕಿಟ್ ನಲ್ಲಿ ಸ್ಯಾನಿಟೈಸರ್, ಹ್ಯಾಂಡ್‌ವಾಶ್ ಸೋಪ್, ಬಟ್ಟೆ ಸೋಪ್, ೨ ತರಹದ ಮಾಸ್ಕ್ ಮತ್ತು ಸ್ಯಾನಿಟರಿ ಪ್ಯಾಡ್ ಒಳಗೊಂಡಿದೆ. ಅದೇ ರೀತಿ ಪುರುಷರಿಗೆ ನೀಡಲಾಗುವ ಕಪ್ಪು ಬಣ್ಣದ ಕಿಟ್ ನಲ್ಲಿ ಸ್ಯಾನಿಟೈಸರ್, ಹ್ಯಾಂಡ್‌ವಾಶ್, ಸೋಪ್, ಬಟ್ಟೆ ಸೋಪು ಮತ್ತು ೨ ತರಹದ ಮಾಸ್ಕ್ ಸೇರಿವೆ.

ಈ ಸಂದರ್ಭದಲ್ಲಿ ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಪ್ರೊಬೇಷನರಿ ಕಾರ್ಮಿಕ ಅಧಿಕಾರಿ ಡಾ. ದತ್ತಾತ್ರೇಯ ಗಾದಾ, ಹಿರಿಯ ಕಾರ್ಮಿಕ ನಿರೀಕ್ಷಕ ರವೀಂದ್ರ ಕುಮಾರ ಬಲ್ಲೂರ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋಷ ಕುಲಕಣ ð, ಏಕ್ಸಿಕ್ಯೂಟೀವ್ ಮಂಜುನಾಥ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಮಾಹಾದೇವ ಬೆಳಮಗಿ, ಉದಯ ಕಿರಣಗಿ ರೇಷ್ಮಿ, ರಾಮು ಗುಮ್ಮಟ, ಶರಣುರೆಡ್ಡಿ, ಶ್ರೀನಿವಾಸ ದೇಸಾಯಿ ಉಪಸ್ಥಿತರಿದ್ದರು.

Latest Indian news

Popular Stories