ಕೊಡಗು | ಕಾವೇರಿ ನದಿಯಲ್ಲಿ ಮುಳುಗಿ ಮೂವರು ಮೃತ್ಯು

ಕುಶಾಲನಗರ ಸಮೀಪ ಕೂಡಿಗೆಯಲ್ಲಿ ಸ್ಥಾನಕ್ಕೆ ತೆರಳಿದ ಮೂವರು ಸ್ನೇಹಿತರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಚಿಕ್ಕತೂರಿನ ನಿವಾಸಿ ಶ್ರೀನಿವಾಸ್ ಅಲಿಯಾಸ್ ಅಪ್ಪು (23) ಕಣಿವೆಯ ಸಚಿನ್ (25) ಮುಳುಸೋಗೆಯ ಜನತಾ ಕಾಲೋನಿಯ ನಿವಾಸಿ ವಿನೋದ್ (25) ಮೃತಪಟ್ಟ ದುರ್ದೈವಿಗಳು ಎಂದು ಹೇಳಲಾಗಿದೆ.

5 ಜನ ಸ್ನೇಹಿತರು ಸಂಜೆ 5 ಗಂಟೆ ಸಮಯದಲ್ಲಿ ಕಾರು ನಿಲ್ಲಿಸಿ, ನದಿಯ ಬಳಿ ಸ್ಥಾನಕ್ಕೆಂದು ಇಳಿದ ಸಂದರ್ಭ ಆಳವಾದ ಜಾಗದಲ್ಲಿ ಮುಳುಗಿದ ಒಬ್ಬನನ್ನು ರಕ್ಷಿಸಲು ಹೋದ ಮತ್ತೆ ಇಬ್ಬರೂ ಕೂಡ ಮುಳುಗಿ ಮೃತಪಟ್ಟಿದ್ದಾರೆ ಇದೀಗ ಓರ್ವನ ಮೃತ ದೇಹ ದೊರಕಿದ್ದು ಇನ್ನುಳಿದ ಮೃತ ದೇಹಕ್ಕಾಗಿ ಶೋಧ ಕಾರ್ಯ ಬರದಿಂದ ಸಾಗುತ್ತಿದೆ. ಡಿ ವೈ ಎಸ್ ಪಿ ಗಂಗಾಧರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Latest Indian news

Popular Stories