Kodagu

ಬೆಂಗಳೂರು: ಹನಿ ಟ್ರ್ಯಾಪ್ ಪ್ರಕರಣ ಭೇದಿಸಿದ ಪೋಲೀಸರು

ಬೆಂಗಳೂರಿನಲ್ಲಿ ಹನಿ ಟ್ರಾಪ್ ನಡೆಸುತಿದ್ದ ಕೊಡಗಿನ ಇಬ್ಬರು ಸೇರಿ ಒಟ್ಟು ಮೂವರು ವಂಚಕರ ಬಂಧನವಾಗಿದೆ.

ಬೆಂಗಳೂರಿನ ಶ್ರೀನಗರದಲ್ಲಿ ನೆಲೆಸಿರುವ ನಿವೃತ್ತ ಸರ್ಕಾರಿ ನೌಕರನಾಗಿರುವ ಸುಧೀಂದ್ರ ಎಂಬುವರಿಗೆ ಆರೋಪಿಗಳು ಬರೋಬ್ಬರಿ 82 ಲಕ್ಷ ರೂಪಾಯಿ ವಂಚಿಸಿದ್ದಾರೆ.

ಸುಧೀಂದ್ರ ನೀಡಿದ ದೂರಿನ ಮೇರೆಗೆ ಮುಖ್ಯ ಆರೋಪಿ, ಸುಂಟಿಕೊಪ್ಪದ ನಿವಾಸಿ ಅಣ್ಣಮ್ಮ, ಬೆಟ್ಟೆಗೇರಿಯ ನಿವಾಸಿ ಲೋಕೇಶ್, ಬೆಂಗಳೂರಿನ ನಿವಾಸಿ ಸ್ನೇಹ, ಈ ಎಲ್ಲ ಆರೋಪಿಗಳು ಬೊಮ್ಮನಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಕೃತ್ಯಕ್ಕೆ ಸ್ನೇಹ ಪತಿ ಲೋಕೇಶ್ ಸಾತ್ ನೀಡಿದ. ಇವರ ಕಾಟ ಮಿತಿಮೀರಿದಾಗ ಸುಧೀಂದ್ರ ಅವರು ಜಯನಗರ ಪೊಲೀಸರಿಗೆ ದೂರು ನೀಡಿದರು. ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button