ವಿಮಾನದ ಟಾಯ್ಲೆಟ್​ನಲ್ಲಿ ಕುಸಿದು ಬಿದ್ದು ಪೈಲಟ್ ಸಾವು: 271 ಪ್ರಯಾಣಿಕರಿದ್ದ ವಿಮಾನ ತುರ್ತು ಭೂಸ್ಪರ್ಶ

ಮಿಯಾಮಿ: 271 ಪ್ರಯಾಣಿಕರನ್ನು ಹೊತ್ತ ವಿಮಾನದ ಪೈಲಟ್ ಇದ್ದಕ್ಕಿದ್ದಂತೆ ಸಾವಿಗೀಡಾದ ಘಟನೆ ಭಾನುವಾರ ರಾತ್ರಿ ಅಮೆರಿಕದಲ್ಲಿ ನಡೆದಿದೆ.

ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ವಿಮಾನದ ಟಾಯ್ಲೆಟ್​ನಲ್ಲಿ ಪೈಲಟ್​ ಮೃತಪಟ್ಟಿದ್ದು ತಕ್ಷಣವೇ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಯಿತು. 271 ಪ್ರಯಾಣಿಕರೊಂದಿಗೆ ಮಿಯಾಮಿಯಿಂದ ಚಿಲಿಗೆ ಹೊರಟಿತ್ತು.

ಮಿಯಾಮಿಯಿಂದ ಚಿಲಿಗೆ ತೆರಳುತ್ತಿದ್ದ ವಾಣಿಜ್ಯ ವಿಮಾನ ಲಾಟಾಮ್ ಏರ್‌ಲೈನ್ಸ್‌ನ ಕಮಾಂಡರ್ ಇವಾನ್ ಆಂಡೌರ್ (56) ಅವರು ಬಾತ್‌ರೂಂನಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಅವರಿಗೆ ಹೃದಯ ಸ್ತಂಭನ ಉಂಟಾಗಿದೆ. ಕೂಡಲೇ ಸಮಯ ಸ್ಫೂರ್ತಿ ಮೆರೆದ ಸಹ ಪೈಲಟ್‌ಗಳು ಪನಾಮಾದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದಾರೆ.

ವಿಮಾನದ ಪ್ರಯಾಣಿಕರ ನಡುವೆ ಇದ್ದ ಒಬ್ಬ ನರ್ಸ್ ಹಾಗೂ ಇಬ್ಬರು ವೈದ್ಯರು, ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಪೈಲಟ್ ನೆರವಿಗೆ ಧಾವಿಸಿದ್ದಾರೆ. ಅವರ ಪ್ರಯತ್ನಗಳ ನಡುವೆಯೂ ಪೈಲಟ್ ಜೀವ ಉಳಿಸುವುದು ಸಾಧ್ಯವಾಗಿಲ್ಲ. ಪನಾಮಾ ನಗರದಲ್ಲಿ ವಿಮಾನ ಇಳಿದ ಬಳಿಕ ಪೈಲಟ್ ಇವಾನ್ ಅವರ ನಿಧನವನ್ನು ಪ್ರಕಟಿಸಲಾಯಿತು.

ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಾಟಾಮ್ ಏರ್‌ಲೈನ್ಸ್, ವಿಮಾನ ಹಾರಾಟದ ವೇಳೆ ಜೀವಗಳನ್ನು ಉಳಿಸುವ ಗುರಿಯೊಂದಿಗೆ ಇರುವ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಲ್ಯಾಂಡಿಂಗ್ ವೇಳೆ ಸೂಕ್ತ ವೈದ್ಯಕೀಯ ಗಮನ ಹರಿಸಿದರೂ ಇವಾನ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗದ್ದು ಖೇದಕರ ಎಂದು ಹೇಳಿದೆ.

Latest Indian news

Popular Stories